ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-480.80 ಕೋಟಿ ರೂ.ವ್ಯವಹಾರ, 1.52 ಕೋಟಿ ರೂ.ನಿವ್ವಳ ಲಾಭ, ಶೇ.100 ಸಾಲ ವಸೂಲಾತಿ

0

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದೆ. ಆಡಿಟ್ ಪೂರ್ವ ಅಂಕಿಅಂಶಗಳ ಪ್ರಕಾರ ವರ್ಷಾಂತ್ಯಕ್ಕೆ 480.80 ಕೋಟಿ ರೂ.ವಾರ್ಷಿಕ ವ್ಯವಹಾರವನ್ನು ಮಾಡಿ 1.52 ಕೋಟಿ ರೂ.ನಿವ್ವಳ ಲಾಭಗಳಿಸಿದೆ. 23 ವರ್ಷಗಳ ಬಳಿಕ ಪ್ರಥಮ ಬಾರಿಗೆ ಶೇ.100 ಸಾಲ ವಸೂಲಾತಿ ಮಾಡಿ ದಾಖಲೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ತಿಳಿಸಿದ್ದಾರೆ.ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
480.80 ಕೋಟಿ ರೂ.ವ್ಯವಹಾರ, 1.52 ಕೋಟಿ ರೂ.ನಿವ್ವಳ ಲಾಭ, ಶೇ.100 ಸಾಲ ವಸೂಲಾತಿ

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದೆ. ಆಡಿಟ್ ಪೂರ್ವ ಅಂಕಿಅAಶಗಳ ಪ್ರಕಾರ ವರ್ಷಾಂತ್ಯಕ್ಕೆ 480.80 ಕೋಟಿ ರೂ.ವಾರ್ಷಿಕ ವ್ಯವಹಾರವನ್ನು ಮಾಡಿ 1.52 ಕೋಟಿ ರೂ.ನಿವ್ವಳ ಲಾಭಗಳಿಸಿದೆ. 23 ವರ್ಷಗಳ ಬಳಿಕ ಪ್ರಥಮ ಬಾರಿಗೆ ಶೇ.100 ಸಾಲ ವಸೂಲಾತಿ ಮಾಡಿ ದಾಖಲೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ತಿಳಿಸಿದ್ದಾರೆ. ಅವರು ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ 2023-24ನೇ ವಾರ್ಷಿಕ ವ್ಯವಹಾರವನ್ನು ವಿವರಿಸಿ ಮಾತನಾಡಿದರು.


ಸಂಘವು ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಆಲಂತಾಯ, ಗೋಳಿತ್ತೊಟ್ಟು, ಕೊಣಾಲು ಕಂದಾಯ ಗ್ರಾಮಗಳನ್ನು ಒಳಗೊಂಡಿದ್ದು 64 ವರ್ಷಗಳ ಇತಿಹಾಸ ಹೊಂದಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಾಣುತ್ತಿದೆ. 2023-24ನೇ ಸಾಲಿನಲ್ಲಿ ವ್ಯವಹಾರದಲ್ಲಿ ಗಣನೀಯ ಸಾಧನೆಯನ್ನು ಮಾಡಿದೆ. ವರ್ಷಾಂತ್ಯಕ್ಕೆ 30 ಕೋಟಿ ರೂ.ಠೇವಣಿ ಹೊಂದಿದೆ. 80 ಕೋಟಿ ರೂ.ಸದಸ್ಯರ ಸಾಲ, 106 ಕೋಟಿ ರೂ.ದುಡಿಯುವ ಬಂಡವಾಳವಿದೆ. ಸಂಘದಲ್ಲಿ ಒಟ್ಟು 6259 ಸದಸ್ಯರಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಸಂಘದ ಸದಸ್ಯರ ಸಹಕಾರದೊಂದಿಗೆ ಸಂಘವು ಪ್ರತಿ ವರ್ಷ ಪ್ರಗತಿ ಕಾಣುತ್ತಿದೆ ಎಂದು ಉಮೇಶ್ ಶೆಟ್ಟಿ ಪಟ್ಟೆ ಹೇಳಿದರು.


ಸಂಘದ ಉಪಾಧ್ಯಕ್ಷ ಕಮಲಾಕ್ಷ, ನಿರ್ದೇಶಕರಾದ ಜಯಾನಂದ ಪಿ., ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ಸುದರ್ಶನ್, ಪ್ರಶಾಂತ ರೈ, ಉಷಾ ಅಂಚನ್, ಸುಮಿತ್ರ, ಸುಲೋಚನಾ, ಅಣ್ಣು ಬಿ., ಗುರುರಾಜ್ ಭಟ್, ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಕರ ರೈ ಉಪಸ್ಥಿತರಿದ್ದರು.

ಸಂಘವು ಹಲವು ವರ್ಷಗಳ ಬಳಿಕ ಶೇ.100 ಸಾಲ ವಸೂಲಾತಿ ಸಾಧನೆ, 1.52 ಕೋಟಿ ರೂ.ಲಾಭ ಗಳಿಸಿ ದಾಖಲೆ ಮಾಡಿದೆ. ನನ್ನ ಸುದೀರ್ಘ 30 ವರ್ಷಗಳ ಅಧ್ಯಕ್ಷತೆಯ ಅವಧಿಯಲ್ಲಿ ಸಂಘವು ಈ ರೀತಿಯ ದಾಖಲೆಯ ವ್ಯವಹಾರವನ್ನು ಮಾಡಿರುವುದು ಸಂತಸ ತಂದಿದೆ. ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘವಾಗಿ ಗುರುತಿಸಿಕೊಳ್ಳಲು ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
-ಉಮೇಶ್ ಶೆಟ್ಟಿ ಪಟ್ಟೆ ಅಧ್ಯಕ್ಷರು
ನೆಲ್ಯಾಡಿ ಪ್ರಾ.ಕೃ.ಪ.ಸಹಕಾರಿ ಸಂಘ ನಿ.

ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ವ್ಯವಹಾರ ಕ್ಷೇತ್ರದಲ್ಲಿ ದಾಖಲೆಯ ವ್ಯವಹಾರವನ್ನು ಮಾಡಿದೆ. 23 ವರ್ಷಗಳ ಬಳಿಕ ಸಂಘವು ಶೇ.100 ಸಾಲ ವಸೂಲಾತಿಯನ್ನು ಮಾಡಿ ದಾಖಲೆ ನಿರ್ಮಿಸಿದೆ. 1.52 ಕೋಟಿ ರೂ.ಲಾಭವೂ ಸಂಘದ ಇತಿಹಾಸದಲ್ಲೇ ಅತೀ ಹೆಚ್ಚು ಲಾಭವಾಗಿರುತ್ತದೆ. ಆಡಳಿತ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಗಳ ಅತೀ ಹೆಚ್ಚಿನ ಶ್ರಮ ಮತ್ತು ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿಯನ್ನು ಕಾಣುವಂತಾಗಿದೆ.
-ದಯಾಕರ ರೈ ಕೆ.ಯಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ
ನೆಲ್ಯಾಡಿ ಪ್ರಾ.ಕೃ.ಪ.ಸ.ಸಂಘ ನಿ.

LEAVE A REPLY

Please enter your comment!
Please enter your name here