ಪುಣ್ಚಪ್ಪಾಡಿ ಸಾರಕರೆ ಆದ್ಯ ನಿಲಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಆದ್ಯ ನಿಲಯದಲ್ಲಿ ಮೇ.16 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸೇವಾ ಬಯಲಾಟವಾಗಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಜರಗಿತು.

ಸಂಜೆ ಶ್ರೀ ದೇವಿಯ ಮಹಾಪೂಜೆ, ರಾತ್ರಿ ಅನ್ನಸಂತರ್ಪಣೆ ಜರಗಿತು. ಯಕ್ಷಗಾನ ಬಯಲಾಟದ ಸೇವಾಕರ್ತರಾದ ಪುಣ್ಚಪ್ಪಾಡಿ ಸಾರಕರೆ ಆದ್ಯ ನಿಲಯದ ವಾರಿಜಾ ರಾಮಣ್ಣ ರೈ ಮತ್ತು ಮಕ್ಕಳು, ಅಳಿಯಂದಿರು, ಸೊಸೆ ಹಾಗೂ ಮೊಮ್ಮಕ್ಕಳು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು. ಸಮಾರಂಭದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರ-ಪರವೂರ ಹಿತೈಷಿಗಳು, ಕುಟುಂಬಸ್ಥರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here