ಪೆಟ್ರೋಲ್ ರೇಟ್ ಏರಿಕೆಯ ಚಿಂತೆ ಬಿಡಿ, ಸಿ.ಎನ್.ಜಿ. ಕಿಟ್ ಅಳವಡಿಸಿ ಖುಷಿ ಪಡಿ-ಅನಧಿಕೃತ ಕಿಟ್ ಹಾಕಿಸ್ಕೊಂಡು ‘ಮೋಸ ಪೋಯೆ’ ಎನ್ನಬೇಡಿ – ಶಿಲ್ಪಾ ಅಟೋ ಗ್ಯಾಸ್ ನಿಮ್ಮ ನಂಬಿಕೆಯ ಸೇವಕ ಎನ್ನುವುದನ್ನು ಮರೆಯಬೇಡಿ

0

ಲೊವೊಟೊ ಸಿ.ಎನ್.ಜಿ ಕಿಟ್ ಸರಕಾರದಿಂದ ಅನುಮತಿ ಪಡೆದ ಏಕೈಕ ಕಿಟ್
ಶಿಲ್ಪಾ ಅಟೋ ಗ್ಯಾಸ್ ಪುತ್ತೂರು ಸುತ್ತಮುತ್ತಲಿನ ಜನರ 25 ವರ್ಷಗಳ ನಂಬಿಕೆಯ ಸ್ನೇಹಿತ

ಪುತ್ತೂರು: ಕಾರು ಇಂದು ನಮ್ಮ ಜೀವನಕ್ಕೆ ಅಗತ್ಯ ಸೌಲಭ್ಯವಾಗಿ ಮಾರ್ಪಟ್ಟಿದೆ. ಹಾಗೆಯೇ ಇಂದು ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಮತ್ತು ವಿವಿಧ ಮಾದರಿಯ ಕಾರುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ ಏರುತ್ತಿರುವ ಇಂಧನ ವೆಚ್ಚ ಮತ್ತು ಅತ್ಯಾಧುನಿಕ ಮಾದರಿಯ ಕಾರುಗಳಲ್ಲಿ ಕಡಿಮೆ ಮೈಲೇಜ್ ಸಮಸ್ಯೆಯಿಂದಾಗಿ ಕಾರು ನಿರ್ವಹಣೆ ಗ್ರಾಹಕರಿಗೆ ಬಹಳ ದೊಡ್ಡ ತಲೆನೋವಾಗಿರುವುದಂತು ಸುಳ್ಳಲ್ಲ. ಇದಕ್ಕೆಲ್ಲಾ ಉತ್ತಮ ಪರಿಹಾರವೆಂಬಂತೆ ಇದೀಗ ಸಿ.ಎನ್.ಜಿ. ಅಳವಡಿಕೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಸಿ.ಎನ್.ಜಿ ಎಂದು ಕರೆಯಲ್ಪಡುವ ಈ ಇಂಧನವು ನ್ಯಾಚುರಲ್ ಫ್ರೆಂಡ್ಲಿಯೂ ಹೌದು ಯೂಸರ್ ಫ್ರೆಂಡ್ಲಿಯೂ ಹೌದು.


ಇಂಧನ ಕ್ಷಮತೆಯಲ್ಲೂ ಸಿ.ಎನ್.ಜಿ.ಯೇ ಬೆಸ್ಟ್
ಸಿ.ಎನ್.ಜಿ. ಇಂಧನ ಪರಿಸರ ಸ್ನೇಹಿ ಮಾತ್ರವಲ್ಲದೇ ಗ್ರಾಹಕ ಸ್ನೇಹಿಯಾಗಿದೆ. ಪೆಟ್ರೋಲ್ ಗಿಂತ 25% ಹೆಚ್ಚು ಮೈಲಜನ್ನು ಸಿ.ಎನ್.ಜಿ ಮೂಲಕ ಪಡೆಯಬಹುದು. ಪೆಟ್ರೋಲ್ ಕಾರುಗಳು ಒಂದು ಲೀಟರ್ ಗೆ ಸರಾಸರಿ 15 ರಿಂದ 17 ಕಿ.ಮೀ ಮೈಲೇಜ್ ನೀಡಿದರೆ, ಸಿ.ಎನ್.ಜಿ.ಯಿಂದ ನೀವು ಒಂದು ಕೆ.ಜಿ.ಗೆ 25 ರಿಂದ 30 ಕಿ.ಮೀ ಮೈಲೇಜ್ ಪಡೆಯಲು ಸಾಧ್ಯವಿದೆ ಮತ್ತು ಇದು ಈಗಾಗಲೇ ಪ್ರೂವ್ ಆಗಿದೆ.

ಪೆಟ್ರೋಲ್-ಡಿಸೇಲ್ ಗೆ ಹೋಲಿಸಿದ್ರೆ ರೇಟ್ ಕೂಡಾ ಕಡಿಮೆ
ಸಿ.ಎನ್.ಜಿ ಇಂಧನವನ್ನು ನಮ್ಮ ದೇಶದಲ್ಲೇ ಉತ್ಪಾದಿಸುವ ಕಾರಣ ಪೆಟ್ರೋಲ್ ಮತ್ತು ಡಿಸೇಲ್ ಇಂಧನಗಳಿಗೆ ಹೋಲಿಸಿದರೆ ಸಿ.ಎನ್.ಜಿ. ಇಂಧನ ರೇಟ್ ಸಹ ಕಡಿಮೆಯಾಗಿರುತ್ತದೆ. ಹಾಗಾಗಿಯೇ ನಮ್ಮ ದೇಶದಲ್ಲಿ ಸಿ.ಎನ್.ಜಿ. ಅತ್ಯಂತ ಕಡಿಮೆ ದರದಲ್ಲಿ ಲಭಿಸುತ್ತಿರುವ ಇಂಧನವಾಗಿದೆ.

ಚೀಪೆಸ್ಟ್ ಮತ್ತು ಸೇಫೆಸ್ಟ್ ಇಂಧನ ಸಿ.ಎನ್.ಜಿ.
ಇನ್ನು, ಪೆಟ್ರೋಲಿಗೆ ಹೋಲಿಸಿದ್ರೆ ಸಿ.ಎನ್.ಜಿ ಇಂಧನ ಸೇಫ್ ಕೂಡಾ ಆಗಿದೆ. ಇದರ ದಹನಶೀಲತೆ 5%-15% ಆಗಿದ್ದು ಆಟೋ-ಇಗ್ನಿಷನ್ ಟೆಂಪರೇಚರ್ ಪೆಟ್ರೋಲ್ ಗಿಂತ ಹೆಚ್ಚಿರುತ್ತದೆ. ಬಿಸಿ ವಾತಾವರಣದಲ್ಲಿ ಸಿ.ಎನ್.ಜಿ ಇಂಧನಕ್ಕೆ ಬೇಗನೆ ಬೆಂಕಿ ಹಿಡಿಯುವುದಿಲ್ಲ, ಹಾಗಾಗಿ ನಿಮ್ಮ ವಾಹನ ಹೀಟ್ ವಾತಾವರಣದಲ್ಲೂ ಸೇಫಾಗಿರುತ್ತದೆ.

ಸಿ.ಎನ್.ಜಿ. ಅಳವಡಿಕೆಗೆ ಪುತ್ತೂರಿನಲ್ಲಿ ‘ಶಿಲ್ಪಾ ಆಟೋ ಗ್ಯಾಸ್’ ಬೆಸ್ಟ್
ಇನ್ನು, ನಿಮ್ಮ ವಾಹನಕ್ಕೆ ನೀವು ಸಿ.ಎನ್.ಜಿ. ಕಿಟ್ ಅಳವಡಿಸಲು ಯೋಚಿಸುತ್ತಿದ್ದಲ್ಲಿ ನಿಮ್ಮ ಆಯ್ಕೆ ಶಿಲ್ಪಾ ಆಟೋ ಗ್ಯಾಸ್ ಬೆಸ್ಟ್ ಆಗಿದೆ. ಇದು ಆರ್.ಟಿ.ಒ. ಅಂಗೀಕೃತ ರೆಟ್ರೋಫಿಟ್ಮೆಂಟ್ ಸೆಂಟರ್ ಆಗಿದ್ದು, ಕಳೆದ 25 ವರ್ಷಗಳಿಂದ ಪುತ್ತೂರು ಸುತ್ತಮುತ್ತಲಿನ ಗ್ರಾಹಕರಿಗೆ ಬೆಸ್ಟ್ ಸರ್ವಿಸ್ ನೀಡುತ್ತಿದ್ದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.

ಕಾರು ಮತ್ತು ಆಟೋ ರಿಕ್ಷಾಗಳಿಗೆ ಸರಕಾರದಿಂದ ಅನುಮತಿ ಪಡೆದ ಎಲ್ಲಾ ಮಾದರಿಯ ಸಿ.ಎನ್.ಜಿ. ಕಿಟ್ ಗಳನ್ನು ಇಲ್ಲಿ ಅಳವಡಿಸಿಕೊಡಲಾಗುತ್ತದೆ. ಮಾತ್ರವಲ್ಲದೇ ಉತ್ತಮ ಕ್ಷಮತೆಯನ್ನು ಹೊಂದಿರುವ, ಬಿ ಎಸ್4, ಬಿ ಎಸ್6 ಸೇರಿದಂತೆ ಎಲ್ಲಾ ಕಂಪೆನಿಯ ವಾಹನಗಳಿಗೆ ಸರಕಾರದಿಂದ ಅನುಮತಿ ಪಡೆದಿರುವ ಲೊವೊಟೋ ಕಿಟ್ ಗಳನ್ನೇ ಅಳವಡಿಸಲಾಗುತ್ತದೆ. ಸಿ.ಎನ್.ಜಿ ಕಿಟ್ ಗಳನ್ನು ನಿಮ್ಮ ವಾಹನಗಳಿಗೆ ಅಳವಡಿಸುವ ಮೂಲಕ ಆಟೋ ರಿಕ್ಷಾಗಳಿಗೆ 50%, ಕಾರುಗಳಿಗೆ 60%, ವಾಣಿಜ್ಯ (ಸಾಗಾಣಿಕೆ) ವಾಹನಗಳಲ್ಲಿ 40% ಇಂಧನ ಉಳಿತಾಯ ಮಾಡಬಹುದಾಗಿದೆ.

ನಿಮ್ಮ ವಾಹನಗಳಿಗೆ ಸಿ.ಎನ್.ಜಿ. ಕಿಟ್ ಅಳವಡಿಸುವಾಗ ಇದನ್ನು ಮರೆಯದಿರಿ
ಅನಧಿಕೃತ ಸೆಂಟರ್ ಗಳಲ್ಲಿ ಗ್ಯಾಸ್ ಕಿಟ್ ಅಳವಡಿಸಿಕೊಂಡು ದಾಖಲೆ ಪತ್ರಗಳಿಗಾಗಿ ಅಲೆದಾಡಬೇಕಾದ ಪ್ರಮೇಯ ಇಲ್ಲಿಲ್ಲ. ಆರ್.ಸಿ. ಬುಕ್ ನಲ್ಲಿ ದಾಖಲಾತಿ ಸೌಲಭ್ಯಗಳು, 100% ಕ್ವಾಲಿಟಿ ಫಿಟ್ಮೆಂಟ್, ಅತ್ಯಾಧುನಿಕ ಒಬಿಡಿ ಕಿಟ್ ಗಳು ಕಂಪ್ಯೂಟರ್ ಟ್ಯೂನಿಂಗ್ ಸಹಿತ ಇಲ್ಲಿ ಲಭ್ಯವಿದ್ದು, ವಿಶಾಲವಾದ ವರ್ಕ್ ಶಾಪ್ ನಲ್ಲಿ ಏಕಕಾಲದಲ್ಲಿ 4 ಕಾರುಗಳಿಗೆ ಗ್ಯಾಸ್ ಕಿಟ್ ಅಳವಡಿಸುವ ವ್ಯವಸ್ಥೆ ಇಲ್ಲಿದೆ. ನುರಿತ ಮೆಕ್ಯಾನಿಕ್ ಗಳು ತ್ವರಿತ ಸೇವೆಯನ್ನು ನೀಡುತ್ತಿದ್ದು, ಗ್ಯಾಸ್ ಕನ್ವರ್ಷನ್ ನಲ್ಲಿ 25 ವರ್ಷಗಳ ಅನುಭವವಿರುವ ಸ್ಥಳೀಯ ಸಂಸ್ಥೆ ಶಿಲ್ಪಾ ಆಟೋ ಗ್ಯಾಸ್ ನಲ್ಲಿ ಬಜಾಜ್ ಫೈನಾನ್ಸ್ ಸಾಲ ಸೌಲಭ್ಯ ಲಭ್ಯವಿದೆ.

LEAVE A REPLY

Please enter your comment!
Please enter your name here