ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಕೆ-ಸಿಇಟಿ ವಿದ್ಯಾಮೃತ ತರಬೇತಿ ಕಾರ್ಯಾಗಾರ

0

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ರವರ ಸಾರಥ್ಯದ ರೈ ಎಸ್ಟೇಟ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಗ್ರಾಮೀಣ ಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಬಿಎನ್‌ಎಂ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ವಿಕಸನ ಫೌಂಡೇಶನ್, ಟಿಸಿಹೆಚ್‌ಆರ್ ಆಪ್, ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಮತ್ತು ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನ ಇವರು ಹಮ್ಮಿಕೊಂಡಿದ್ದ ಕೆ-ಸಿಇಟಿ ವಿದ್ಯಾಮೃತ ತರಬೇತಿ ಕಾರ್ಯಾಗಾರ ಪುತ್ತೂರಿನ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಿತು.

15 ದಿನಗಳ ಆಫ್ ಲೈನ್ ಮತ್ತು 15 ದಿನಗಳ ಆನ್ ಲೈನ್ ತರಗತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಕೆ-ಸಿಇಟಿ ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸವನ್ನು ಮೂಡಿಸಲಾಯಿತು. ಪುತ್ತೂರು ಮತ್ತು ಆಸುಪಾಸಿನ ಸರಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಯ ಸುಮಾರು 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ನನಗೆ ಕೆ-ಸಿಇಟಿ ಪರೀಕ್ಷೆಯ ಸಂಪೂರ್ಣ ಮಾಹಿತಿ ಮೊದಲು ಇರಲಿಲ್ಲ, ಬೋರ್ಡ್ ಎಕ್ಸಾಮ್ ಮತ್ತು ಸಿಇಟಿ ಎಕ್ಸಾಮ್‌ಗೆ ತುಂಬಾ ವ್ಯತ್ಯಾಸ ಇದೆ. ಈ ತರಗತಿಗೆ ಬಂದ ಕಾರಣ ಮೊದಲು ಬರ್ತಿದ್ದ ರಾಂಕ್‌ಗಿಂತ ಇವಾಗ ಸ್ವಲ್ಪ ಆದ್ರೂ ಜಾಸ್ತಿ ಬರಬಹುದು ಎಂಬ ನಂಬಿಕೆ ಮತ್ತು ಆತ್ಮವಿಶ್ವಾಸ ಬಂದಿದೆ. ಪುತ್ತೂರಿನಲ್ಲಿ ತರಗತಿ ಆಯೋಜಿಸಿದಕ್ಕೆ ತುಂಬಾ ಧನ್ಯವಾದಗಳು.
ಸಿಂಚನ, ಸರಕಾರಿ ಪಿಯು ಕಾಲೇಜು ಕಡಬ

LEAVE A REPLY

Please enter your comment!
Please enter your name here