ದೇರ್ಲ: ಮನೆಯ ಮಾಡು ಕುಸಿತ – ಕುಂಬ್ರ ವರ್ತಕರ ಸಂಘದಿಂದ ಟಾರ್ಪಲ್ ಕೊಡುಗೆ 

0

ಪುತ್ತೂರು: ಮೇ.20 ರಂದು ರಾತ್ರಿ ಸುರಿದ ಮಳೆಗೆ ಅಣ್ಣು ದೇರ್ಲ ಎಂಬವರ ವಾಸದ ಮನೆಯ ಮಾಡು ಸಂಪೂರ್ಣ ಮುರಿದು ಬಿದ್ದಿತ್ತು. ಮನೆಯಲ್ಲಿ ವಾಸವಿದ್ದ ಅಣ್ಣುರವರ ತಾಯಿ ಸರೋಜ ಹಾಗೂ ಇತರರಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಮನೆಯ ಮಾಡು ಸಂಪೂರ್ಣ ಕುಸಿದಿರುವುದರಿಂದ ವಾಸಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡ ಕುಂಬ್ರ ವರ್ತಕರ ಸಂಘವು ಅಣ್ಣುರವರಿಗೆ ಟಾರ್ಪಲ್ ಅನ್ನು ಮೇ.23 ರಂದು ಕೊಡುಗೆಯಾಗಿ ನೀಡಿದೆ. ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ ರಾಯರ ನೇತೃತ್ವದಲ್ಲಿ ಟಾರ್ಪಲ್ ನೀಡಲಾಯಿತು. 

ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ ಮತ್ತು ದಿವಾಕರ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಭವ್ಯ ರೈ ಹಾಗೂ ಅಣ್ಣುರವರ ಕುಟುಂಬದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here