ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವತಿಯಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಪುತ್ತೂರಿನ ಪ್ರಖ್ಯಾತ ನೃತ್ಯ ಸಂಸ್ಥೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವತಿಯಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ ತೆಂಕಿಲದಲ್ಲಿ ನಡೆಯಿತು.

ಉತ್ತಮ ಸಮಾಜಕ್ಕೆ ಸ್ವಚ್ಛ ಪರಿಸರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಈ ಸಂಸ್ಥೆ ಪ್ರಕೃತಿಯ ಕಡೆಗೂ ಗಮನ ಹರಿಸಿದೆ. ಗುರು, ವಿದ್ವಾನ್ ದೀಪಕ್ ಕುಮಾರ್ ಇವರ ನೇತೃತ್ವದಲ್ಲಿ ಸಂಸ್ಥೆಯ ಕೆಲವು ವಿದ್ಯಾರ್ಥಿಗಳು ತೆಂಕಿಲದ ವಿವೇಕಾನಂದ ಶಾಲೆ ಹಾಗೂ ನರೇಂದ್ರ ಕಾಲೇಜಿನ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಮೂಲಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದುಷಿ ಪ್ರೀತಿಕಲಾ, ಅಪೂರ್ವ ಗೌರಿ, ಅಕ್ಷತಾ, ಹರ್ಷಿತಾ ದೆಹಲಿ, ವಿಂಧ್ಯಾ ಕಾರಂತ, ಪ್ರಣಮ್ಯ ಮತ್ತು ಅನನ್ಯ ಮತ್ತಿತರರು ಸಹಕರಿಸಿದರು.

LEAVE A REPLY

Please enter your comment!
Please enter your name here