ಕಕ್ವೆ ತರವಾಡು ಮನೆಯ ಎಲ್ಯಣ್ಣ ಗೌಡ ನಿಧನ

0

ಆಲಂಕಾರು : ಆಲಂಕಾರು ಗ್ರಾಮದ ಪಂಚವಟಿ ಕಕ್ವೆ ತರವಾಡು ಮನೆಯ ದಿ.ಲಿಂಗಪ್ಪ ಗೌಡ ಮಗ ಎಲ್ಯಣ್ಣ ಗೌಡ(80ವ) ವಯೋಸಹಜವಾಗಿ ಮೆ.22 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪ್ರಗತಿಪರ ಕೃಷಿಕರಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು.ಮೃತರು ಪತ್ನಿ ಕಮಲ ಮಗ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ದಾಮೋದರ ಗೌಡ , ಬೆಳಿಯಪ್ಪ ಗೌಡ,ಪುತ್ತೂರು ತಾಲೂಕು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ
ನ್ಯಾಯವಾದಿ ಕೃಷ್ಣಪ್ಪ ಗೌಡ,ಉಮೇಶ ಗೌಡ, ಆಲಂಕಾರು ಸಿ.ಎ ಬ್ಯಾಂಕ್ ಉದ್ಯೋಗಿ ಮಹೇಶ ಮಗಳು ಗಿರಿಜ,ಚೆನ್ನಮ್ಮ. ಸೊಸೆಯಂದಿರಾದ ಜಯಂತಿ, ಸರೋಜಿನಿ,ವಿದ್ಯಾ,ಚೈತ್ರಾ,ಸ್ಮೀತಾ,ಅಳಿಯಂದಿರಾದ ಶೀನಪ್ಪ ಗೌಡ,ಸೀತಾರಾಮ ಗೌಡ ಹಾಗು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು ಹಾಗು ಬಂಧುಮಿತ್ರರನ್ನು ಅಗಲಿದ್ದಾರೆ.ಮೃತರ ಮನೆಗೆ ವಿವಿಧ ಸಂಘ ಸಂಸ್ಥೆಯ ಗಣ್ಯರು ಹಾಗು ಪ್ರಮುರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here