ಜೆಇಇ ಪರೀಕ್ಷೆಯಲ್ಲಿ 998 ರ‍್ಯಾಂಕ್ ಗಳಿಸಿದ ಸೊರಕೆಯ ನಿಶಾನ್ ಕುಮಾರ್ ಗೆ  ಸನ್ಮಾನ 

0

ಪುತ್ತೂರು: ಜೆಇಇ ಪರೀಕ್ಷೆಯಲ್ಲಿ 998 ರ‍್ಯಾಂಕ್ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 96.83 ಅಂಕ ಗಳಿಸಿದ ನಿಶಾನ್ ಕುಮಾರ್ ಸೊರಕೆ ಯವರನ್ನು ಅವರ ನಿವಾಸದಲ್ಲಿ ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಮುಂದಾಳತ್ವದಲ್ಲಿ  ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ,ಮುಂಡೂರು ಗ್ರಾ.ಪಂ ಸದಸ್ಯೆ ರಸಿಕ ರೈ ಮೇಗಿನಗುತ್ತು, ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಕುಮಾರಿ ರಾಶಿ ರೈ ಮೇಗಿನಗುತ್ತು,ಸನ್ಮಾನಿತಗೊಂಡ  ನಿಶಾನ್ ಕುಮಾರ್  ಅವರ ತಂದೆ ವಿಜಯ ಕುಮಾರ್ ಸೊರಕೆ, ತಾಯಿ ಪುಷ್ಪಾವತಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here