ಪುತ್ತೂರು: ಕರ್ನಾಟಕ ವಿಧಾನಪರಿಷತ್ ಗೆ ಜೂನ್ 3 ರಂದು ಚುನಾವಣೆ ನಡೆಯಲಿದ್ದು ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯೂ ಸೇರಿದಂತೆ 5 ಜಿಲ್ಲೆ ಮತ್ತು 3 ತಾಲೂಕುಗಳನ್ನು ಒಳಗೊಂಡಿದೆ.
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸೂಚನೆಯಂತೆ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ. ಬಿ. ವಿಶ್ವ ನಾಥ್ ರೈ, ಉಪ್ಪಿನoಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜರಾಮ್, ಉಪ್ಪಿನಂಗಡಿ ಬ್ಲಾಕ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮತ್ತು ಉಸ್ತುವಾರಿಗಳಾದ ಕೆ. ಎಂ. ಮುಸ್ತಫ, ವಿಜಯಕುಮಾರ್ ಸೊರಕೆ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಪದವೀಧರ ಕ್ಷೇತ್ರ ಅಭ್ಯರ್ಥಿ ಆಯನೂರ್ ಮಂಜುನಾಥ್, ಶಿಕ್ಷಕರ ಕ್ಷೇತ್ರ ಅಭ್ಯರ್ಥಿ ಡಾ ಕೆ. ಕೆ. ಮಂಜುನಾಥ್ ರವರ ಪರಿಚಯ ಪತ್ರ ಬಿಡುಗಡೆಗೊಳಿಸಲಾಯಿತು.
ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯನೂರ್ ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಕೆ. ಕೆ. ಮಂಜುನಾಥ್ ಸ್ಪರ್ದಿಸುತ್ತಿದ್ದು, ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಗೆ ಡಿಸಿಸಿ ಯಿಂದ ಉಸ್ತುವಾರಿ ಗಳನ್ನು ನೇಮಿಸಲಾಗಿದ್ದು ಪುತ್ತೂರು ಬ್ಲಾಕ್ ಗೆ ಡಿಸಿಸಿ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಉಪ್ಪಿನoಗಡಿ ಬ್ಲಾಕ್ ಗೆ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ವಿಜಯಕುಮಾರ್ ಸೊರಕೆ ಇವರನ್ನು ನೇಮಿಸಲಾಗಿರುತ್ತದೆ.