ದೋಳ್ಪಾಡಿ: ಸೇತುವೆಯಿಂದ ಬಿದ್ದ ಬೈಕ್-ಗಾಯಾಳು ವಸಂತ ಸಾವು

0

ಕಾಣಿಯೂರು: ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಕೊಜಂಬೇಡಿ ಎಂಬಲ್ಲಿ ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡ ರಾತ್ರಿ ಸಾವನ್ನಪ್ಪಿದ್ದಾರೆ.ದೋಳ್ಪಾಡಿ ಗ್ರಾಮದ ಅಜ್ಜಿನಡ್ಕ ನಿವಾಸಿ ಬಾಬು ಎಂಬವರ ಪುತ್ರ ವಸಂತ (40 ವ.) ಮೃತಪಟ್ಟವರು.


ಮೇ.13 ರಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ತನ್ನ ಮೋಟಾರ್ ಬೈಕ್ ನಲ್ಲಿ ಎಡಮಂಗಲಕ್ಕೆ ಹೋಗಿದ್ದ ವಸಂತರವರು ಅದೇ ಬೈಕಿನಲ್ಲಿ ವಾಪಸು ಮನೆಗೆ ಬರುತ್ತಿರುವಾಗ ಕೊಜಂಬೇಡಿ ಎಂಬಲ್ಲಿರುವ ಸೇತುವೆ ಬಳಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಸೇತುವೆಯಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ತಕ್ಷಣ ಕಾಣಿಯೂರು ಆಸ್ಪತ್ರೆಗೆ ಸಾಗಿಸಿ ಪ್ರಥಮಚಿಕಿತ್ಸೆ ನೀಡಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಂದೆ ಬಾಬು, ತಾಯಿ ಬೊಮ್ಮಿ, ಪತ್ನಿ ಸುಜಾತಾ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here