ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಚುನಾವಣೆ-ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಂದ ಕೆನರಾ ಸ್ಕೂಲ್, ಶಾರದಾ ಕಾಲೇಜುಗಳಲ್ಲಿ ಮತಯಾಚನೆ

0

ಪುತ್ತೂರು: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್ ಬೋಜೆಗೌಡ ಅವರು ಮೇ.24ರಂದು ಮಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಕೆನರಾ ಸ್ಕೂಲ್ ಮತ್ತು ಶಾರದಾ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಸಂಸ್ಥೆಗಳಿಗೆ ಭೇಟಿ ನೀಡಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಬೆಂಬಲಿಸಿ ಮತ ಹಾಕುವಂತೆ ಅಲ್ಲಿನ ಉಪನ್ಯಾಸವರ್ಗ ಮತ್ತು ಸಿಬ್ಬಂಧಿವರ್ಗದವರಲ್ಲಿ ಮತಯಾಚಿಸಿದರು.


ಈ ವೇಳೆ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಶ್ರೀ ಬ್ರಿಜೇಶ್ ಚೌಟ ,ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮಂಗಳೂರು ಧಕ್ಷಿಣದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಕಾಲೇಜಿನ ಆಡಳಿತ ವರ್ಗ, ಉಪನ್ಯಾಸ ವರ್ಗ , ಶಿಕ್ಷಕ ವರ್ಗ ಮತ್ತು ಪದವೀಧರ ಮತದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here