ಗಾನಸಿರಿಯಲ್ಲಿ ಸುಗಮಸಂಗೀತ ತರಗತಿಗಳಿಗೆ ದಾಖಲಾತಿ ಆರಂಭ…

0

ಪುತ್ತೂರು: ಕಳೆದ 23 ವರ್ಷಗಳಲ್ಲಿ ದಾಖಲೆಯ 32 ಸಾವಿರ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿದ ಖ್ಯಾತ ಗಾಯಕರು ಮತ್ತು ಸಂಗೀತ ಗುರುಗಳು ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರ ಪುತ್ತೂರು ಇದರ ಪುತ್ತೂರು ಪ್ರಧಾನ ಶಾಖೆ , ಉಪ್ಪಿನಂಗಡಿ , ಕುಟ್ರುಪಾಡಿ , ರಾಮಕುಂಜ , ಸುಳ್ಯ , ವಿಟ್ಲ ಮತ್ತು ಬಿ.ಸಿ. ರೋಡ್ ಶಾಖೆಗಳಲ್ಲಿ ಸುಗಮಸಂಗೀತ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿರುತ್ತದೆ…

ಭಜನ್ಸ್ , ಭಕ್ತಿಗೀತೆ , ಭಾವಗೀತೆ , ಜನಪದ ಗೀತೆ ,ದೇಶಭಕ್ತಿ ಗೀತೆ ಮತ್ತು ಮಧುರ ಚಲನಚಿತ್ರ ಗೀತೆಗಳನ್ನು ಶಾಸ್ತ್ರೀಯ ಸಂಗೀತದ ತಳಹದಿಯಲ್ಲಿ ತರಬೇತಿ ನೀಡುವ ಮೂಲಕ ಮನೆ ಮಾತಾಗಿರುವ ಗಾನಸಿರಿ ಸಂಸ್ಥೆಯ ಪುತ್ತೂರು ಪ್ರಧಾನ ಶಾಖೆಯಲ್ಲಿ ಕೊಳಲು , ತಬಲಾ , ಮತ್ತು ಚಿತ್ರಕಲಾ ತರಬೇತಿಯೂ ಲಭ್ಯವಿದೆ… ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯ ಜೊತೆಗೆ ವಿಶಿಷ್ಟ ಮತ್ತು ವಿಭಿನ್ನ ಶೈಲಿಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಬೆಳೆಯಲು ಮತ್ತು ಬೆಳಗಲು ಅವಕಾಶ ಮಾಡಿಕೊಡುತ್ತಿರುವುದು ತಿಳಿದ ವಿಚಾರ… ಅದಲ್ಲದೆ ಸಂಸ್ಥೆಯ YouTube ಚಾನೆಲ್ , GS ವಾಹಿನಿ ಮತ್ತು ಗಾನಸಿರಿ ಕ್ರಿಯೇಷನ್ಸ್ facebook page Live ಕಾರ್ಯಕ್ರಮದ ಮೂಲಕ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ವೇದಿಕೆ ಕಲ್ಪಿಸಿ ಕೊಡಲಾಗುತ್ತಿದೆ …


ಈಗಾಗಲೇ ಸಂಸ್ಥೆಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ನಾಡಿನ ವಿವಿಧ ಟಿ.ವಿ. ಚಾನೆಲ್ ಗಳ ರಿಯಾಲಿಟಿ ಶೋಗಳಲ್ಲಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಮಿಂಚುತ್ತಿದ್ದು ಕಲಾಸಕ್ತರು ಗಾನಸಿರಿಯಲ್ಲಿ ದಾಖಲಾತಿ ಮಾಡಿಕೊಳ್ಳಲು ಮತ್ತು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 9901555893 ಯನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ…

LEAVE A REPLY

Please enter your comment!
Please enter your name here