ಎಸ್ ಎಸ್ ಎಲ್ ಸಿ 100% ಫಲಿತಾಂಶ ಪಡೆದ ಬುರೂಜ್ ಶಾಲೆಗೆ “ಅಚೀವ್ಮೆಂಟ್ ಅವಾರ್ಡ್’ ಪ್ರದಾನ

0

ಪುಂಜಾಲಕಟ್ಟೆ : ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಮೂಡುಪಡುಕೋಡಿ ಇಲ್ಲಿನ ವಿದ್ಯಾರ್ಥಿಗಳು 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಲ್ಲಿ ತೇರ್ಗಡೆ ಹೊಂದಿ, ಶೇಕಡಾ 100 ಫಲಿತಾಂಶ ಪಡೆದಿರುವುದಕ್ಕೆ , ಮುಸ್ಲಿಂ ಎಜುಕೇಷನ್ ಇನ್ಸ್ಟಿಟ್ಯೂಟ್ ಫೆಡರೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಇತ್ತೀಚಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿ.ಎ.ಮೊಯ್ದೀನ್ ಮೆಮೊರಿಯಲ್ ಸರ್ಟಿಫಿಕೇಟ್ ಅಚೀವ್ಮೆಂಟ್ ಅವಾರ್ಡ್ ಅನ್ನು (B.A.Mohideen Memorial Certificate Of Achievement Award)
ಮೀಫ್ ಅನ್ಯುವಲ್ ಮೀಟ್ ಮತ್ತು ಎಕ್ಸೆಲೆನ್ಸ್ ಅವಾರ್ಡ್ 2024 ಮಂಗಳೂರಿನ ಜೆಪ್ಪಿನ ಮೊಗರು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಇಲ್ಲಿ
ಬುರೂಜ್ ಶಾಲಾ ಶಿಕ್ಷಕ ತಂಡಕ್ಕೆ ಪ್ರದಾನ ಮಾಡಲಾಯಿತು. ಶಾಲಾ ಸಂಸ್ಥಾಪಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯೋಪಾಧ್ಯಾಯಿನಿ ಜಯಶ್ರೀ ಸಾಲ್ಯಾನ್, ವಿಮಲ, ಶಿಕ್ಷಕರಾದ ಶೇಖ್ ಜಲಾಲುದ್ದೀನ್,ಚಂದ್ರಾವತಿ, ಅನ್ನಪೂರ್ಣೇಶ್ವರಿ, ಎಸ್.ಪಿ.ರಝೀಯ ಈ ವೇಳೆ ಹಾಜರಿದ್ದರು.

LEAVE A REPLY

Please enter your comment!
Please enter your name here