ವಿಟ್ಲ ಸರಕಾರಿ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ

0

ಪುತ್ತೂರು: ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫಿಟ್ಟರ್, ವೆಲ್ಡರ್ ಹಾಗೂ ಟರ್ನರ್ ವಿಭಾಗದ ವಿದ್ಯಾರ್ಥಿಗಳಿಗೆ Kirloskar Toyota Textile Machinery
Pvt. Ltd.ಮಂಗಳೂರು ಅವರಿಂದ ಕ್ಯಾಂಪಸ್ ಸಂದರ್ಶನ ನಡೆಯಿತು.


ಸಂದರ್ಶನದಲ್ಲಿ ದಕ್ಷಿಣ ಕನ್ನಡದ ವಿವಿಧ ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ತರಬೇತಿದಾರರು ಭಾಗವಹಿಸಿದ್ದು, 42 ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,ಮೌಖಿಕ ಸಂದರ್ಶನ ನಡೆಸಿ
ತರಬೇತಿದಾರರನ್ನು ಆಯ್ಕೆ ಮಾಡಲಾಯಿತು.


KTTM ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಾದ,ಮನೋಜ್ ಮಾತನಾಡಿ, ತಾಂತ್ರಿಕ ಕೌಶಲ ಹೊಂದಿರುವ ತರಬೇತಿದಾರರಿಗೆ ಉತ್ಪಾದನಾ ವಲಯದ ವಿವಿಧ
ಉದ್ಯೋಗವಕಾಶಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದರು.


ಸಂಸ್ಥೆಯ ಪ್ರಾಚಾರ್ಯರಾದ, ಹರೀಶ್ ಕೋಟ್ಯಾನ್‌ರವರು ತರಬೇತಿದಾರರಿಗೆ ಮಾರ್ಗದರ್ಶನ ನೀಡಿದರು. ಉದ್ಯೋಗ ಕೋಶ ಅಧಿಕಾರಿ ಸುಕನ್ಯಾರಾವ್ ಕಾರ್ಯಕ್ರಮ ಆಯೋಜಿಸಿದರು, ಜೋಯ್ಲಿನ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here