ಸರ್ಕಾರಿ ಐ.ಟಿ.ಐ ವಿಟ್ಲ: ಪ್ರವೇಶಾತಿಗೆ ಅರ್ಜಿ ಆಹ್ವಾನ

0

ಪುತ್ತೂರು: ರಾಜ್ಯದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆಗಸ್ಟ್ 2024 ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ದಿನಾಂಕ:20-05-2024ರಿಂದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಆನ್‌ಲೈನ್ ಮುಖಾಂತರ ಇಲಾಖಾ ವೆಬ್‌ಸೈಟ್ www.cite.karnataka.gov.in ರಲ್ಲಿ ನೇರವಾಗಿ ಅಥವಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ/ಸಾರ್ವಜನಿಕ ಸೈಬರ್ ಕೆಫೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿಟ್ಲ ಸರಕಾರಿ ಐ.ಟಿ.ಐ ಸಂಸ್ಥೆಯಲ್ಲಿ COPA(Computer), Electrician, Electronics Mechanic, Fitter, R&AC ,Technician, Mechanic Electric Vehicle, Industrial Robotics & Digital Manufactruing Technicianವೃತ್ತಿಗಳಿಗೆ ಅವಕಾಶವಿದೆ. ದಿನಾಂಕ 03-06-2024ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.


ಹೆಚ್ಚಿನ ವಿವರಗಳಿಗಾಗಿ ವಿಟ್ಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ನೇರವಾಗಿ ಅಥವಾ
ದೂರವಾಣಿ ಸಂಖ್ಯೆ: 08255-200052 /9449242456 ಮೂಲಕ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here