ನೀರಕಟ್ಟೆ: ಹೆದ್ದಾರಿ ಬದಿ ತೋಡಿಗೆ ಬಿದ್ದ ಇನ್ನೋವಾ, ಪ್ರಯಾಣಿಕರು ಪಾರು

0

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರೊಂದು ಹೆದ್ದಾರಿ ಬದಿಯ ತೋಡಿಗೆ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಮೇ 28ರಂದು ಸಂಜೆ ನಡೆದಿದೆ.


ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಇನ್ನೋವಾ ನೀರಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯ ತೋಡಿಗೆ ಬಿದ್ದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು ಈ ಪೈಕಿ ಮಹಿಳೆಯೊಬ್ಬರಿಗೆ ಗಾಯವಾಗಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಇದೊಂದು ಅಪಾಯಕಾರಿ ತಿರುವು ಆಗಿದ್ದು ಇಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತವೆ.

LEAVE A REPLY

Please enter your comment!
Please enter your name here