ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ದ ನೂತನ ಸಮುದಾಯ ಭವನ ನಿರ್ಮಾಣದ ಮನವಿ ಪತ್ರ ಬಿಡುಗಡೆ

0

ವಿಟ್ಲ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.)ಮಾಣಿ ಇದರ ಸುಮಾರು 5 ಕೋಟಿ ಅಂದಾಜು ವೆಚ್ಚದಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನ,ಗುರು ಮಂದಿರ ಮತ್ತು ಅನ್ನಪೂರ್ಣೇಶ್ವರಿ ಗುಡಿ ನಿರ್ಮಾಣದ ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ದೇಣಿಗೆ ಸಂಗ್ರಹದ ಮನವಿ ಪತ್ರವನ್ನು ಕೇಂದ್ರ ಸರಕಾರದ ಮಾಜಿ ಸಚಿವರು,ಶ್ರೀ ಕುದ್ರೋಳಿ  ಕ್ಷೇತ್ರದ ನವೀಕರಣದ ರೂವಾರಿ ಬಿ ಜನಾರ್ದನ ಪೂಜಾರಿ ಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾಣಿ ಸಂಘದ  ಗೌರವ ಸಲಹೆಗಾರರು,ರಾಷ್ಟೀಯ ಬಿಲ್ಲವ ಮಹಾಮಂಡಲದ ವಕ್ತಾರರು ಬೇಬಿ ಕುಂದರ್ , ಗೌರವಾಧ್ಯಕ್ಷ ಈಶ್ವರ ಪೂಜಾರಿ, ಅಧ್ಯಕ್ಷ ಸುರೇಶ್ ಪೂಜಾರಿ, ಕಟ್ಟಡ ಸಮಿತಿ ಅಧ್ಯಕ್ಷ ನಾರಾಯಣ ಸಾಲ್ಯಾನ್, ಕಾರ್ಯದರ್ಶಿ ರಮೇಶ್ ಪೂಜಾರಿ, ಉಪಾಧ್ಯಕ್ಷ   ತನಿಯಪ್ಪ ಪೂಜಾರಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಯಂತಿ.ವಿ ,ಮೆನೇಜರ್ ಜನಾರ್ದನ ಪೂಜಾರಿ ಹಾಗೂ ವಸಂತ್ ಪೂಜಾರಿ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here