ಮೇ.31: ಮೆಸ್ಕಾಂ ನೆಲ್ಯಾಡಿ ಶಾಖಾ ದ್ವಿತೀಯ ದರ್ಜೆ ಮೆಕ್ಯಾನಿಕ್ ಅಬ್ದುಲ್ ರಹಿಮಾನ್ ಸೇವಾ ನಿವೃತ್ತಿ

0

ನೆಲ್ಯಾಡಿ: ಮೆಸ್ಕಾಂ ನೆಲ್ಯಾಡಿ ಶಾಖೆಯಲ್ಲಿ ದ್ವಿತೀಯ ದರ್ಜೆ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ರಹಿಮಾನ್ ಪಿ.ಅವರು ಮೇ.31 ರಂದು ನಿವೃತ್ತಿಯಾಗಲಿದ್ದಾರೆ. ಇವರು ಒಟ್ಟು 26ವರ್ಷ ಮೆಸ್ಕಾಂನ ಕಡಬ, ಉಪ್ಪಿನಂಗಡಿ, ನೆಲ್ಯಾಡಿ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ನಿವಾಸಿಯಾಗಿರುವ ಅಬ್ದುಲ್ ರಹಿಮಾನ್ ಅವರು 17-10-1998ರಂದು ಮಾನ್ಸೂನ್ ಗ್ಯಾಂಗ್‌ಮನ್ ಆಗಿ ಕಡಬ ಶಾಖೆಗೆ ಸೇರ್ಪಡೆಗೊಂಡಿದ್ದರು. 1-4-2005ರಂದು ಪ್ರೊಬೇಶನರಿ ಮಜ್ದೂರ್ ಆಗಿ ಆಯ್ಕೆಗೊಂಡು ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡಿದ್ದರು. 1-4-2008ರಂದು ಜೂನಿಯರ್ ಲೈನ್‌ಮೇನ್ ಆಗಿ ಖಾಯಂಗೊಂಡು ಉಪ್ಪಿನಂಗಡಿ ಶಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. 9-2-2009ರಲ್ಲಿ ನೂತನವಾಗಿ ಪ್ರಾರಂಭಗೊಂಡ ನೆಲ್ಯಾಡಿ ಶಾಖೆಗೆ ನಿಯುಕ್ತಿಗೊಂಡು 1-7-2011ರಂದು ಸಹಾಯಕ ಮಾರ್ಗದಾಳು ಹುದ್ದೆಗೆ ಹಾಗೂ 24-12-2024ರಂದು ಮೆಕ್ಯಾನಿಕ್ ದರ್ಜೆ-2 ಆಗಿ ಪದೋನ್ನತಿಗೊಂಡು ನೆಲ್ಯಾಡಿ ಶಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ಇವರು ಒಟ್ಟು 10 ವರ್ಷ ತಾತ್ಕಾಲಿಕ ನೆಲೆಯಲ್ಲಿ ಮತ್ತು 16 ವರ್ಷ ಖಾಯಂ ನೆಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here