ಉಪ್ಪಿನಂಗಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಆಶ್ರಯದಲ್ಲಿ ‘ಯುವ ಪ್ರತಿಭಾ’ ಕಾಂಚನೋತ್ಸವ ಜೂ.1ರಂದು ಸಂಜೆ 5 ಗಂಟೆಯಿಂದ ಬೆಂಗಳೂರಿನ ಗಿರಿನಗರದ ಅಕ್ಷರಂ ಸಭಾಂಗಣದಲ್ಲಿ ನಡೆಯಲಿದೆ.
ಈ ಯುವ ಪ್ರತಿಭಾ ಕಾಂಚನೋತ್ಸವದಲ್ಲಿ ಅಮೆರಿಕದ ಡಲ್ಲಾಸ್‌ನಲ್ಲಿರುವ ಜಾಹ್ನವೀ ಶಿವಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಮೋಘ ಕೊಳಲುವಾದನ ಕಚೇರಿಯು ನಡೆಯಲಿದೆ. ಇವರಿಗೆ ಪಿಟೀಲಿನಲ್ಲಿ ವಿದುಷಿ ಅದಿತಿ ಕೃಷ್ಣಪ್ರಕಾಶ್, ಮೃದಂಗದಲ್ಲಿ ವಿದ್ವಾನ್ ಸುನಿಲ್ ಸುಬ್ರಹ್ಮಣ್ಯ ಹಾಗೂ ಘಟಂನಲ್ಲಿ ವಿದ್ವಾನ್ ಎನ್. ಫಣೀಂದ್ರರವರು ಸಹವಾದನವನ್ನು ಮಾಡಲಿದ್ದಾರೆ. ಈ ಕಚೇರಿಗೂ ಮುನ್ನ ಬಾಲಪ್ರತಿಭೆಗಳಾದ ಅರ್ಪಿತಾ ಕುಳೂರ್, ಇಂಚರ, ಪೃಷ್ನಿ ಭಟ್, ಸೌಮ್ಯಶ್ರೀ ಫಣಿ ವೇದಾಳ ಇವರಿಂದ ಪಿಟೀಲು ಚತುಷ್ಟಯ ಕಾರ್ಯಕ್ರಮ ಪ್ರಭವ್ ಎನ್. ಅವರ ಮೃದಂಗ ಸಾಥ್‌ನೊಂದಿಗೆ ಐದು ಗಂಟೆಯಿಂದ ನಡೆಯಲಿದೆ ಎಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಸ್ಥೆಯ ಪ್ರಕಟಣೆ ತಿಳಿಸಿದೆ.