ಪುಂಜಾಲ್ಕಟ್ಟೆ: ಬುರೂಜ್ ಶಾಲಾ ಪ್ರಾರಂಭೊತ್ಸವ

0

ಪುಂಜಾಲ್ಕಟ್ಟೆ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಮೂಡುಪಡುಕೋಡಿ 2024-2025ನೇ ಸಾಲಿನ ಶಾಲಾ ಪ್ರಾರಂಭೊತ್ಸವ ಸಂಭ್ರಮದಿಂದ ಮೇ.31 ರಂದು ನಡೆಯಿತು.
ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಬರಮಾಡಿಕೊಂಡರು ಹಾಗೂ ಶಾಲಾ ನಿಯಮಗಳನ್ನು ತಿಳಿಯಪಡಿಸಿದರು. ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಶಾಲಾ ಶಿಸ್ತುಗಳನ್ನು ತಿಳಿಯಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವೃಂದ ಮಕ್ಕಳನ್ನು ಬರಮಾಡಿಕೊಂಡು ಸ್ವಾಗತಿಸಿದರು. ಈ ಸಂದರ್ಭದಲ್ಲಿ 2023-2024ನೇ ಸಾಲಿನಲ್ಲಿ ಪೂರ್ಣ ಹಾಜರಾತಿ ಇದ್ದಂತಹ ವಿದ್ಯಾರ್ಥಿಗಳಾದ 8ನೇ ತರಗತಿಯ ಸನಾ ಶೆಟ್ಟಿ ಹಾಗೂ 9ನೇ ತರಗತಿಯ ಪವನ್ ಶೆಟ್ಟಿ ಇವರಿಗೆ ಇರ್ವತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್ ಪ್ರಶಸ್ತಿ ವಿತರಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಲಾಯಿತು. ಈ ಸಂದರ್ಭದಲ್ಲಿ ಶೇಖ್ ಅಸ್ಮಾ, ಶೇಖ್ ಸಾದಿಯ, ವಿಮಲ, ಜಲಾಲುದ್ದೀನ್, ಎಲ್ಸಿ ಲಸ್ರಾದೊ, ಪವಿತ್ರ, ಚಂದ್ರಾವತಿ, ಅನ್ನಪೂರ್ಣೇಶ್ವರಿ, ವನಿತಾ, ಖುರ್ಷೀದ್, ನೂರ್ ಜಹಾನ್ ಎಸ್.ಪಿ. ರಝೀಯ, ಮಮತಾ ಆರ್, ಚೇತನಾ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here