ನಾಣಿಲ ಶಾಲಾ ಪ್ರಾರಂಭೋತ್ಸವ

0

ಕಾಣಿಯೂರು: ದ.ಕ ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಶಾಲಾ ಪ್ರಾರಂಭೋತ್ಸವ ಮೇ 31ರಂದು ನಡೆಯಿತು. ಮಕ್ಕಳಿಗೆ ಆರತಿ ಬೆಳಗಿಸಿ, ಗುಲಾಬಿ ನೀಡುವ ಮೂಲಕ ಮಕ್ಕಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ದಲಾರಿ, ಮುಖ್ಯಗುರು ಪದ್ಮಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕುಸುಮಾವತಿ ಕಳ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಪುರಂದರ ಅಂಬುಲ, ವಸಂತ ಮುಂಗಳಿಮಜಲು, ದಿನೇಶ್ ಕುಕ್ಕುನಡ್ಕ , ಬಾಲಕೃಷ್ಣ ಕಂಡಿಗ, ಶಕುಂತಲಾ ಕುಂಬ್ಲಾಡಿ, ಪುಷ್ಪಲತಾ ಬೀರೋಳಿಗೆ, ಸಹ ಶಿಕ್ಷಕರಾದ ಸುನಿಲ್, ನಂದಿನಿ, ಚೇತನ, ಸವಿತಾ, ಶ್ವೇತ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here