ಪುತ್ತಿಲ ಪರಿವಾರದ ಕಾರ್ಯಕರ್ತರ ಧ್ವನಿಯಾಗಲು ನಾನು ಹೊರಗೆ ನಿಂತದ್ದು – ರಾಜಾರಾಮ ಭಟ್

0

ಪುತ್ತೂರು: ಪುತ್ತಿಲ ಪರಿವಾರದ ನಾಯಕರು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಹೊರತು ಇದುವರೆಗೆ ಸ್ಥಾನ ಮಾನ ಸಿಕ್ಕಿಲ್ಲ. ಆಚೆ ಬಿಜೆಪಿಯೂ ಅಲ್ಲ. ಈಚೇ ಪುತ್ತಿಲ ಪರಿವಾರ ಸಂಘಟನೆಯೂ ಇಲ್ಲ. ಸಂಘಟನೆಯ ಕಾರ್ಯಕರ್ತರ ಧ್ವನಿಯಾಗಲು ನಾನು ಪರಿವಾರದಿಂದ ಹೊರಗೆ ನಿಂತಿರುವುದು ಎಂದು ಪುತ್ತಿಲ ಪರಿವಾರದಲ್ಲಿ ಈ ಹಿಂದೆ ಪ್ರಮುಖವಾಗಿ ಗುರುತಿಸಿಕೊಂಡ ರಾಜಾರಾಮ ಭಟ್ ಹೇಳಿದ್ದಾರೆ.


ಅವರು ಪುತ್ತೂರಿನಲ್ಲಿ ವಿಧಾನಪರಿಷತ್ ಅಭ್ಯರ್ಥಿ ರಘುಪತಿ ಭಟ್ ಅವರ ಜೊತೆ ಪತ್ರಿಕಾಗೋಷ್ಟಿಗೆ ಆಗಮಿಸಿದಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪುತ್ತಿಲ ಪರಿವಾರ ಎಂದು ಹೇಳುವಂತಹದ್ದು ರಾಜಕೀಯ ವ್ಯವಸ್ಥೆಯಲ್ಲಿ ಸಂಘಟನೆಯಲ್ಲಿ ಇಲ್ಲ. ಅದು ಇಲ್ಲದಿರುವಾಗ ನನಗೇನು ಅಲ್ಲಿ ಕೆಲಸ. ಹಾಗಾಗಿ ನಾನು ಹೊರಗಿದ್ದೇನೆ. ಮನೆಯೇ ಇಲ್ಲದಿರುವಾಗ ನಾನು ಅಲ್ಲಿ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೇಗೆ ಹೇಳಲಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಜಾರಾಮ ಭಟ್, ನನಗೆ ಮನೆ ಮುರಿತ ಉಂಟು ಎಂದು ಗೊತ್ತಿತ್ತು. ಆಗ ನಾನು ಅದರಲ್ಲಿ ಸಾಯಬೇಕಾಗಿತ್ತಾ. ಆ ವ್ಯವಸ್ಥೆಯ ಒಳಗೆ ಬಿಜೆಪಿ ಸೇರಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಾಗ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆಯೇ ಹೊರತು ಇದುವರಗೆ ಸ್ಥಾನ ಮಾನ ಸಿಕ್ಕಿಲ್ಲ. ಆಚೆ ಬಿಜೆಪಿಯೂ ಇಲ್ಲ. ಇಚೇಗೆ ಪುತ್ತಿಲ ಪರಿವಾರ ಸಂಘಟನೆಯೂ ಇಲ್ಲ. ಪುತ್ತಿಲ ಪರಿವಾರದಲ್ಲಿ ಹೆಗಲು ಕೊಟ್ಟು ಹೋರಾಟ ಮಾಡಿದ ಸಾಮಾನ್ಯ ಕಾರ್ಯಕರ್ತರ ಗತಿಯೇನು? ಆ ಕಾರ್ಯಕರ್ತರ ಧ್ವನಿಯಾಗಲು ನಾನು ಹೊರಗೆ ನಿಂತಿದ್ದೇನೆ. ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡ ಎಷ್ಟೋ ಮಂದಿ ಕಾರ್ಯಕರ್ತರು ಈಗಲೂ ನಮ್ಮ ಜೊತೆ ಇದ್ದಾರೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಹೋಗಿರುವುದಕ್ಕೆ ಬೇಸರವಿಲ್ಲ. ಆದರೆ ಅದರ ಪ್ರಕ್ರಿಯೆ ಸರಿಯಿಲ್ಲ ಎಂದು ರಾಜಾರಾಮ್‌ ಭಟ್‌ ಹೇಳಿದರು.

LEAVE A REPLY

Please enter your comment!
Please enter your name here