ಕಡಬ ಸರಸ್ವತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ

0

ಕಡಬ : ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬ ಇಲ್ಲಿಯ ಪ್ರಾಥಮಿಕ ವಿಭಾಗದಲ್ಲಿ 2024 25ನೇ ಸಾಲಿನ ಶಾಲಾ ಪ್ರಾರಂಭದ ದಿನದಂದು ತರಗತಿಗೆ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು. ಶಾಲಾ ಮಾತಾಜಿ ವೃ0ದದವರು ಮಕ್ಕಳಿಗೆ ಆರತಿ ಬೆಳಗಿಸಿ ,ತಿಲಕವಿಟ್ಟು ಸಿಹಿಯನ್ನು ನೀಡುವುದರ ಮೂಲಕ ಹಾಗೂ ಶಂಖ ಜಾಗಟೆಯ ವಿಶೇಷ ನಾದದೊಂದಿಗೆ ಮಕ್ಕಳನ್ನು ಸಂಸ್ಥೆಗೆ ಸ್ವಾಗತಿಸಲಾಯಿತು.


ಬಳಿಕ ನಡೆದ ಸರಸ್ವತಿ ವಂದನೆ ಮತ್ತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ ಇವರು ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕಿ ಪ್ರಮೀಳಾ ಲೋಕೇಶ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಗುರು ಮಾಧವ ಕೋಲ್ಪೆ ಉಪಸ್ಥಿತರಿದ್ದರು. ಶಿಕ್ಷಕರಾದ ವಸಂತ ಕರ್0ಬೋಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here