ವಿಟ್ಲದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಆರಂಭಿಸುವ ಬಗ್ಗೆ ಸಮಾಲೋಚನ ಸಭೆ

0

ನೂತನವಾಗಿ ಆರಂಭವಾಗುವ ಶಾಖೆಗೆ ಎಲ್ಲರ ಸಹಕಾರ ಅಗತ್ಯ: ಚಿದಾನಂದ ಬೈಲಾಡಿ

ವಿಟ್ಲ: ಸಮಾಜದ ಎಲ್ಲಾ ವರ್ಗದ ಜನರ ಅಗತ್ಯತೆಗಳಿಗೆ ಸ್ಪಂದಿಸುವ ಇರಾದೆ ನಮ್ಮದಾಗಿದ್ದು, ಈ ಹಿನ್ನಲೆಯಲ್ಲಿ ವ್ಯವಹಾರಕ್ಕೆ ಯೋಗ್ಯವಾದ ಸ್ಥಳಗಳಲ್ಲಿ ಇನ್ನಷ್ಟು ಶಾಖೆಗಳನ್ನು ಪ್ರಾರಂಭಿಸಲು ಯೋಜನೆ ಹಾಕಲಾಗಿದೆ. ಈ ಆರ್ಥಿಕ ವರ್ಷದಲ್ಲಿ ವಿಟ್ಲ ಪರಿಸರದಲ್ಲಿ ನೂತನ ಶಾಖೆಯನ್ಮು ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯರ ಪೂರ್ಣ ಸಹಕಾರ ನಮಗೆ ಬೇಕಾಗಿದ್ದು, ಸಹಕಾರಿ ಬಂಧುಗಳಾದ ತಾವು ಹೆಚ್ಚಿನ ಮೊತ್ತದ ಪಾಲು ಬಂಡವಾಳ ಹಾಗೂ ಠೇವಣಿಗಳನ್ನು ವಿನಿಯೋಗಿಸುವ ಮೂಲಕ ಸಹಕಾರ ಸಂಘವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಲು ಸಹಕರಿಸಬೇಕೆಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿರವರು‌ ಹೇಳಿದರು.

ಅವರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೂತನ ಶಾಖೆಯನ್ನು ವಿಟ್ಲದಲ್ಲಿ ಆರಂಭಿಸುವ ಬಗ್ಗೆ ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು‌.

ಒಕ್ಕಲಿಗ ಗೌಡ ಸೇವಾ ಸಂಘ (ರಿ) ಪುತ್ತೂರು ಇದರ ಆಶ್ರಯದಲ್ಲಿ ಒಟ್ಟು ಸಮಾಜದ ಆರ್ಥಿಕ ಸಬಲೀಕರಣಕ್ಕಾಗಿ ಸಮುದಾಯದ ಬಂಧುಗಳ ಪೂರ್ಣ ಪ್ರಮಾಣದ ಸಹಕಾರದಿಂದ 2002ರಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವನ್ನು ಇಲಾಖೆಯಿಂದ ನೋಂದಣಿ ಮಾಡಿಕೊಂಡು ಪ್ರಾರಂಭಿಸಲಾಯಿತು. ತದನಂತರ ಉತ್ತಮ ವ್ಯವಹಾರವನ್ನು ಮಾಡುತ್ತಾ ಅಧಿಕ ಲಾಭಾಂಶವನ್ನು ಕೂಡ ಪಡೆಯುತ್ತಾ ಬಂದಿದೆ. ವ್ಯವಹಾರದ ವ್ಯಾಪ್ತಿಯನ್ನು ವಿಸ್ತಾರಗೊಳಿಸುವ ಉದ್ದೇಶದಿಂದ ಪುತ್ತೂರು ಎ.ಪಿ.ಎಂ.ಸಿ. ರಸ್ತೆ ಬಳಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್.ಎಂ.ಟಿ, ಕಾಣಿಯೂರು, ಬೆಳ್ಳಾರೆ ಶಾಖೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಮಂಗಳೂರು ತಾಲೂಕು ಹೊರತುಪಡಿಸಿ ಸಂಘವು ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು 6938ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. 2023-24 ರ ಅವಧಿಯಲ್ಲಿ ಸುಮಾರು 542 ಕೋಟಿ ವ್ಯವಹಾರ ಮಾಡಿದ್ದು 99 ಕೋಟಿಯಷ್ಟು ಸಾಲವನ್ನು ನೀಡಲಾಗಿದೆ. ಅಲ್ಲದೆ ಸುಮಾರು 103 ಕೋಟಿ ಠೇವಣಿಯನ್ನು ಹೊಂದಿದೆ. ಪ್ರತಿ ವರ್ಷ ಲಾಭಾಂಶದಲ್ಲಿ ಡಿವಿಡೆಂಟ್ ನೀಡುತ್ತಾ ಬಂದಿದ್ದು, ಕಳೆದ ವರ್ಷ13% ಡಿವಿಡೆಂಟ್ ನೀಡಲಾಗಿದೆ. ಅಲ್ಲದೇ ಕಳೆದ 8 ವರ್ಷದಿಂದ ಸತತ ಆಡಿಟ್ ವರದಿಯಲ್ಲಿ “ಎ” ತರಗತಿಯನ್ನು ಪಡೆಯುತ್ತಾ ಬಂದಿದೆ.
ಈ ಭಾಗದ ಜನರಿಗೆ ಸೇವೆ ನೀಡುವ ನಿಟ್ಟಿನಲ್ಲಿ ವಿಟ್ಲದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸುವ ಚಿಂತನೆ‌ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಈ ಭಾಗದ‌ಜನರ‌ ಸಂಪೂರ್ಣ ಸಹಕಾರ ನಮಗೆ ಬೇಕಾಗಿದೆ ಎಂದರು.

ಸಂಘದ ಉಪಾಧ್ಯಕ್ಷರಾದ ಯು.ಪಿ. ರಾಮಕೃಷ್ಣ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಗೌಡರ ಯಾನೇ ಒಕ್ಕಲಿಗರ ಸಂಘ ವಿಟ್ಲ ಇದರ ಅಧ್ಯಕ್ಷರಾದ ಮೋನಪ್ಪ ಗೌಡ ಶಿವಾಜಿನಗರ, ಗೌರವಾಧ್ಯಕ್ಷರಾದ ಮೋಹನ್ ಕಾಯರ್ ಮಾರ್, ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಮಹಿಳಾ ಘಟಕದ ಅಧ್ಯಕ್ಷರಾದ ಅಮಿತಾ ಗೋಪಾಲಕೃಷ್ಣ ಮೊದಲಾದವರು‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸಹಕಾರ ಸಂಘದ ಸಂಪರ್ಕಧಿಕಾರಿ ಶ್ರೀಧರ ಗೌಡ ಕಣಜಾಲು, ಯುವ ಒಕ್ಕಲಿಗ ಸಂಘ (ರಿ) ಪುತ್ತೂರು ಇದರ ಅಧ್ಯಕ್ಷರಾದ ಅಮರನಾಥ್ ಬಪ್ಪಳಿಗೆ, ವಕೀಲರಾದ ಮಹಾಬಲ ಗೌಡ ಅಡ್ಡಳಿ, ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಮಾಜಿ ಅಧ್ಯಕ್ಷರಾದ ಲಿಂಗಪ್ಪ ಗೌಡ ಶುಭೋದಯ, ಕಿಶೋರ್ ಕೆ.ಎಮ್. ಸಿ.ಪಿ.ಸಿ.ಆರ್.ಐ, ಕೃಷ್ಣಪ್ಪ ಅಡ್ಯಾಲು, ಶಿವರಾಮ್ ಗೌಡ ಮಲಾರ್, ಸದಾನಂದ ಗೌಡ ಸೇರಾಜೆ, ಸಂಜೀವ ಗೌಡ ಪೆಲತ್ತಿಂಜ, ಪೂವಪ್ಪ ಗೌಡ ಸೂರ್ಯ, ಸುಂದರ ಗೌಡ ದಾಸಕೋಡಿ ಲಿಂಗಪ್ಪ ಗೌಡ ಸೂರ್ಯ, ಚಂದಪ್ಪ ಗೌಡ ವಿಟ್ಲ ಮುಡ್ನೂರು. ಪುರಂದರ ಗೌಡ ತಾಳಿಪಡ್ಪು, ಪುನೀತ್ ಮಾಡತ್ತಾರು, ನಾರಾಯಣ ಗೌಡ ಓಟೆ, ವಿಶ್ವನಾಥ ಗೌಡ ನಾಯ್ತೊಟ್ಟು, ಜಗನ್ನಾಥ, ಈಶ್ವರಪ್ಪ ಗೌಡ, ಕುಶಾಲಪ್ಪ ಗೌಡ ಚೆನ್ನಕಜೆ, ಕೇಶವ ಗೌಡ, ಸುಂದರ ಗೌಡ, ಜತ್ತಪ್ಪ ಗೌಡ ಮುದೂರು, ಬಾಬುಗೌಡ ಮುದೂರು, ಚಂದ್ರಶೇಖರ ಗಿರಿನಿವಾಸ, ಕವಿತಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಸ್ವಾಗತಿಸಿ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ ವಂದಿಸಿದರು. ಶಾಖಾ ವ್ಯವಸ್ಥಾಪಕರಾದ ದಿನೇಶ್ ಪೆಲತ್ತಿಂಜ, ಸಿಬ್ಬಂದಿಗಳಾದ ಹರಿಣಾಕ್ಷಿ, ದೇವರಾಜ್, ಯಶ್ವಿತ್ ಹೆಚ್. ಸಹಕರಿಸಿದರು.

LEAVE A REPLY

Please enter your comment!
Please enter your name here