ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ನೀಡುವ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಪದ್ಮಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕುಸುಮಾವತಿ ಕಳ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಪುರಂದರ ಅಂಬುಲ, ವಸಂತ ಮುಂಗಲಿಮಜಲು, ದಿನೇಶ್ ಕುಕ್ಕುನಡ್ಕ, ಬಾಲಕೃಷ್ಣ ಕಂಡಿಗ, ಶಕುಂತಲಾ ಕುಂಬ್ಲಾಡಿ, ಪುಷ್ಪಲತಾ ಬೀರೂಳಿಗೆ, ಸಹ ಶಿಕ್ಷಕರಾದ ಸುನಿಲ್, ನಂದಿನಿ, ಚೇತನ, ಸವಿತಾ, ಶ್ವೇತ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.