ಉಪ್ಪಿನಂಗಡಿ: ಹಿರೇಬಂಡಾಡಿ ಶಾಲಾ ಪ್ರಾರಂಭೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಹಿರೇಬಂಡಾಡಿಯ ಸರಕಾರಿ ಶಾಲೆಯ ಪ್ರಾರಂಭೋತ್ಸವ ಮೇ.31ರಂದು ನಡೆಯಿತು. ವಿದ್ಯಾರ್ಥಿಗಳನ್ನು ಬ್ಯಾಂಡ್‌ನೊಂದಿಗೆ ಮೆರವಣಿಗೆಯಲ್ಲಿ ಕರೆತಂದು, 8ನೇ ತರಗತಿ ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಸ್ವಾಗತಿಸಲಾಯಿತು.

ಶಾಲಾ ಮುಖ್ಯಗುರು ಶ್ರೀಧರ ಭಟ್ ಮಾತನಾಡಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳು, ನೀತಿ- ನಿಯಮಗಳು, ಸಮವಸ್ತ್ರ, ಶಿಸ್ತು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನ ಶಿಕ್ಷಕ ಮನೋಹರ್ ಅವರು ಶಾಲೆಯಲ್ಲಿರುವ ಪಠ್ಯ ಮತ್ತು ಪಠ್ಯ ಪೂರಕ ಸೌಲಭ್ಯಗಳ ಬಗ್ಗೆ ಪ್ರಾತಕ್ಷಿಕೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ, ಸತತ 4 ವರ್ಷಗಳಿಂದ ಎಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬರುತ್ತಿದ್ದು, ಅದನ್ನು ಮುಂದೆಯೂ ಕಾಯ್ದುಕೊಳ್ಳುವಂತೆ ತಿಳಿಸಿ, ಶುಭ ಹಾರೈಸಿದರು.
ಹಿರೇಬಂಡಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂಭವಿ, ಎಸ್‌ಡಿಎಂಸಿ ಸದಸ್ಯರಾದ ಹೇಮಾವತಿ, ಭವಾನಿ, ಶಾಂಭವಿ, ಜಾನಕಿ, ರವೀಂದ್ರ ಪಟಾರ್ತಿ ಉಪಸ್ಥಿತರಿದ್ದು, ಸರಕಾರದಿಂದ ನೀಡಲ್ಪಟ್ಟ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಿಕ್ಷಕರಾದ ಲಲಿತಾ ಸ್ವಾಗತಿಸಿದರು. ವಸಂತ ಕುಮಾರ್ ವಂದಿಸಿದರು. ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಆರತಿ ಸಹಕರಿಸಿದರು.

LEAVE A REPLY

Please enter your comment!
Please enter your name here