ಯುವ ಮೋರ್ಚಾ ವತಿಯಿಂದ ಉಡುಪಿಯಲ್ಲಿ ಶಾಸಕ ಯಶ್ಪಾಲ್ ಸುವರ್ಣ – ಅರುಣ್ ಪುತ್ತಿಲ ಭರ್ಜರಿ ಪ್ರಚಾರ

0

ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರ ಪರ ಉಡುಪಿಯ ಮತದಾರರಿದ್ದಾರೆ: ಅರುಣ್ ಕುಮಾರ್ ಪುತ್ತಿಲ

ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಉಡುಪಿಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಪ್ರಭಾವಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಜಂಟಿಯಾಗಿ ಭರ್ಜರಿ ಪ್ರಚಾರ ನಡೆಸಿದರು.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ ಅರುಣ್ ಪುತ್ತಿಲ ಬಾರ್ ಅಸೋಸಿಯನ್ ಪದಾಧಿಕಾರಿಗಳನ್ನು ಭೇಟಿಯಾಗಿ ಮತಯಾಚಿಸಿದರು.

ಉಡುಪಿ ಕಟಪಾಡಿಯ ಆನಂದತೀರ್ಥ ವಿದ್ಯಾಲಯ, ಉಡುಪಿ ಟೌನ್ ಸಹಕಾರಿ ಬ್ಯಾಂಕ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ಸಿಟಿ ಹಾಸ್ಪಿಟಲ್ ಉಡುಪಿ,ಪ್ರಸಾದ್ ನೇತ್ರಾಲಯ ಉಡುಪಿ, ಗಾಂಧಿ ಹಾಸ್ಪಿಟಲ್ ಉಡುಪಿ, ಶ್ರೀ ಪೂರ್ಣಪ್ರಜ್ಞ ಇವ್ನಿಂಗ್ ಸ್ಕೂಲ್ ಉಡುಪಿ, ಬೆಲ್ ಓ ಸಿಲ್ ಕಾರ್ಖಾನೆ, ಬಾಳಿಗ ಫಿಶ್ ನೆಟ್ಸ್ ಕಾರ್ಖಾನೆ, ಪ್ರಕಾಶ್ ಇಂಡಸ್ಟ್ರಿ ಅಂಬಲಪಾಡಿಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಅರುಣ್ ಪುತ್ತಿಲ ಜಂಟಿಯಾಗಿ ಮತಯಾಚನೆ ನಡೆಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಬಿಜೆಪಿ ವಕ್ತಾರೆ ಗೀತಾಂಜಲಿ ಸುವರ್ಣ ಜೊತೆಗಿದ್ದರು.

ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಬಿಲ್ಲಾಡಿ, ಉಪಾಧ್ಯಕ್ಷ ಅರ್ಜುನ್ ಪ್ರಭು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಹಾಗೂ ಅಭಿರಾಜ್ ಕಟಪಾಡಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಡಾ.ಸರ್ಜಿಯವರ ಬಗ್ಗೆ ಉತ್ತಮ ಅಭಿಪ್ರಾಯ:

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬೋಜೆಗೌಡರ ಪರ ಉಡುಪಿಯಲ್ಲಿ ಉತ್ತಮ ಅಭಿಪ್ರಾಯವಿದ್ದು, ಅದರಲ್ಲೂ ಖ್ಯಾತ ಮಕ್ಕಳ ತಜ್ಞ ಡಾ.ಸರ್ಜಿಯವರ ಜನಪರ ಸೇವೆಗಳು ಜನರಿಗೆ ತಲುಪಿದ್ದು ಅವರ ಪರ ಉಡುಪಿಯ ಮತದಾರರು ನಿಂತಿದ್ದಾರೆ ಎಂದು ಅರುಣ್ ಪುತ್ತಿಲ ತಿಳಿಸಿದರು.

ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಅರುಣ್ ಪುತ್ತಿಲ ಭೇಟಿಯಾಗಿ ಮಾತುಕತೆ ನಡೆಸಿದರು.

LEAVE A REPLY

Please enter your comment!
Please enter your name here