ಬಡಗನ್ನೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ- ಅಂಗವಾಗಿ ಪೂರ್ವಭಾವಿ ಸಭೆ, ಸಮಿತಿ ರಚನೆ

0

ಬಡಗನ್ನೂರು: ಬಡಗನ್ನೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ ಅಂಗವಾಗಿ ಪೂರ್ವಭಾವಿ ಸಭೆ ಜೂ.2ರಂದು ನಡೆಯಿತು.

ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸಭೆಯನ್ನುದ್ದೇಶಿಸಿ ಮಾತನಾಡಿ,  ಶತಮಾನದ ಅಂಚಿನಲ್ಲಿರುವ ಸರಕಾರಿ ಶಾಲೆಯ ಸಂಭ್ರಮ ನಮ್ಮೆಲ್ಲರಿಗೂ ಹರ್ಷದಾಯಕ ತಂದಿದೆ. ಇದರೊಂದಿಗೆ ಶಾಲೆಗೆ ಸುಸಜ್ಜಿತವಾದ ಕಟ್ಟಡ ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳು ಅಗಬೇಕಿದೆ. ಕಟ್ಟಡಕ್ಕೆ  ಅನುದಾನ ಹೊಂದಿಸುವ ಕೆಲಸವನ್ನು ಶಾಸಕರ ಮತ್ತು ಸಂಸದರ  ನೇತೃತ್ವದಲ್ಲಿ ಮಾಡೋಣ. ಉಳಿದಂತೆ ಶಾಲಾ ಕಾಂಪೌಂಡ್, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಅಗಬೇಕಿದೆ ಎಂದ ಅವರು ಶತಮಾನದ ಸಂಭ್ರಮದ ಈ ಸಂದರ್ಭದಲ್ಲಿ ಪ್ರತಿ ತಿಂಗಳು ವಿವಿಧ ರೀತಿಯ ಕಾರ್ಯಕ್ರಮ ಆಯೋಜಿಸಬೇಕು. ಶಾಲೆಯ ಕಲಿತ ಸಾವಿರಾರು ವಿದ್ಯಾರ್ಥಿಗಳಿದ್ದಾರೆ, ಎಲ್ಲರನ್ನೂ ಸಂಪರ್ಕಿಸುವ ಕೆಲಸ ಅಗಬೇಕಿದೆ. ಈ ಎಲ್ಲಾ ಸಂದರ್ಭದಲ್ಲೂ ತಮ್ಮೆಲ್ಲರ ಪೂರ್ಣ ಸಹಕಾರ ಸದಾ ಇರಬೇಕು. ವಿವಿಧ ಸಂಘ ಸಂಸ್ಥೆಗಳ ಒಟ್ಟಾಗಿ ಸೇರಿ ನಮ್ಮೂರ ಶಾಲಾ ಸಂಭ್ರಮ ಅದ್ದೂರಿಯಲ್ಲಿ ಆಚರಿಸಲು ದೇವರು ಅನುಗ್ರಹ ನೀಡಲಿ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ಶಿಕ್ಷಣ ಇಲಾಖೆ ವತಿಯಿಂದ ಕುಂಬ್ರ ಕಸ್ಟರ್ ಸಂಪನ್ಮೂಲ ವ್ಯಕ್ತಿ ಶಶಿಕಲಾ ಮಾತನಾಡಿ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಎಲ್ಲಾ ಕೆಲಸ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ ಆಳ್ವ ಗಿರಿಮನೆ, ಪುತ್ತೂರು ಉದ್ಯಮಿ ಸತೀಶ್ ರೈ ಕಟ್ಟಾವು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ಉಪಾಧ್ಯಕ್ಷ ಶ್ರೀಧರ ನಾಯ್ಕ ನೇರ್ಲಪ್ಪಾಡಿ, ಸುಳ್ಳಪದವು ಬಾಲಸುಬ್ರಹ್ಮಣ್ಯ ಅನುದಾನಿತ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಮಾಜಿ ಅಧ್ಯಕ್ಷ ತ್ಯಾಂಪಣ್ಣ ಸಿ.ಹೆಚ್, ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ, ಉಪಸ್ಥಿತರಿದ್ದರು.

ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಾಂಭವಿ ರೈ ಕುದ್ಕಾಡಿ, ಸಂಘಟನಾ ಕಾರ್ಯದರ್ಶಿ ಸಲಾವುದ್ದಿನ್ ಪದಡ್ಕ, ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಹಾಗೂ ಊರ ಶಿಕ್ಷಣಾಭಿಮಾನಿಗಳು ಭಾಗವಹಿಸಿದರು.

ಶಾಲಾ ಮುಖ್ಯ ಶಿಕ್ಕಕಿ ಹರೀಣಾಕ್ಷಿ ಎ  ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ವಿಜಯಲಕ್ಷ್ಮಿ ವಂದಿಸಿದರು ಶಿಕ್ಷಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.

ಸಮಿತಿ ರಚನೆ ;-

ಶತಮಾನೋತ್ಸವ ಸಮಿತಿ  ಅಧ್ಯಕ್ಷರಾಗಿ ಮಹಮ್ಮದ್ ಬಡಗನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಅಳ್ವ ಗಿರಿಮನೆ ಆಯ್ಕೆಮಾಡಲಾಯಿತು. ಗೌರಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, (ಶಾಸಕರು), ಉಪಾಧ್ಯಕ್ಷರುಗಳಾಗಿ, ಮಣಿತ್ ರೈ ಕುದ್ಕಾಡಿ, ರಾಜೇಶ್ ರೈ ಮೇಗಿನಮನೆ, ಶ್ರೀಧರ ಭಟ್ ಸಿ.ಹೆಚ್, ಶ್ರೀಕೃಷ್ಣ ಗೌಡ ಮೈಂದನಡ್ಕ, ಸಂಚಾಲಕರಾಗಿ ಸತೀಶ್ ರೈ ಕಟ್ಟಾವು, ಜತೆ ಕಾರ್ಯದರ್ಶಿಯಾಗಿ ಬಾಬು ಬಿ ಬಡಗನ್ನೂರು, ಕೋಶಾಧಿಕಾರಿಯಾಗಿ ಸಲಾವುದ್ದೀನ್ ಪದಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ, ಅಬ್ದುಲ್ ರಹಿಮಾನ್ ಬಡಗನ್ನೂರು, ಮಹಾಬಲ ರೈ ಮೇಗಿನಮನೆ, ತ್ಯಾಂಪಣ್ಣ ಸಿ.ಹೆಚ್, ಇಂದಿರಾ, ಯಶೋಧ ಮತ್ತು ಪ್ರೇಮಲತಾ ಇವರನ್ನು ಆಯ್ಕೆಮಾಡಲಾಯಿತು.

LEAVE A REPLY

Please enter your comment!
Please enter your name here