ಪುತ್ತೂರು: ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ 17ನೇ ವರ್ಷದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಅಂಗವಾಗಿ ಜೂ.2ರಂದು ಸಂಘಟನೆ ಸ್ಥಾಪಕ ಅಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ನೇತ್ರತ್ವದಲ್ಲಿ ’ಕನ್ಯಾನ ಭಾರತ್ ಸೇವಾಶ್ರಮದ’ ಇಪ್ಪತ್ತು ಮಕ್ಕಳಿಗೆ ಬರೆಯುವ ಪುಸ್ತಕ ಹಾಗೂ ಪಠ್ಯಕ್ಕೆ ಬೇಕಾಗುವ ಇತರ ವಸ್ತುಗಳನ್ನು ನೀಡಲಾಯಿತು. ಮಕ್ಕಳಿಗೆ ಹಲವು ಆಟೋಟ ಸ್ಪರ್ಧೆಗಳನ್ನು ಸಂಘದ ಯುವ ಸೇನಾನಿಗಳಾದ ಕಾರ್ತಿಕ್ ಬಿ. ಕೆ., ಶೋಭಿತ್, ಕಾರ್ತಿಕ್, ಪ್ರತೀಕ್ಷಾ, ಬಿ. ಕೆ. ಕೌಶಿಕ್, ವಿದ್ಯಾ ನಡೆಸಿಕೊಟ್ಟರು. ಬಳಿಕ ಆಶ್ರಮದಲ್ಲಿರುವ ಸುಮಾರು 90 ಮಂದಿಗೆ ಹಣ್ಣು ಹಂಪಲುಗಳನ್ನು ಹಾಗೂ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಪ್ರೇಮ, ಚಂದ್ರಶೇಖರ್ ಯು ವಿಟ್ಲ, ಬಿ. ಕೆ. ಪ್ರೇಮ, ವಿಮಲ, ಶಾಲಿನಿ, ನಳಿನಿ, ಜಾನಕಿ, ಮೋಹನ್ ದಾಸ್, ಸಂಜೀವ, ಗೀತಾ, ಗಣೇಶ್ ಉಪಸ್ಥಿತರಿದ್ದರು.