ಪೇರಲ್ತಡ್ಕ: ಸಮುದಾಯ ಅಭಿವೃದ್ಧಿ ವಿಭಾಗದ ಸಹಾಯಧನ ಚೆಕ್ ಹಸ್ತಾಂತರ.

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಪೇರಲ್ತಡ್ಕ ಒಕ್ಕೂಟದ ಸಂಗಮ ಸ್ವಸಹಾಯ ಸಂಘದ ರೇವತಿಯವರ ಪುತ್ರಿ ತನುಶ್ರೀಯವರಿಗೆ ಸಮದಾಯ ಅಭಿವೃದ್ಧಿ ವಿಭಾಗದ ವತಿಯಿಂದ ನೀಡಿದ ರೂ.25 ಸಾವಿರದ ಚೆಕ್ಕನ್ನು ಜೂ.2 ರಂದು ಹಸ್ತಾಂತರಿಸಲಾಯಿತು.

ವಿಪರೀತ ಮಳೆಯ ಕಾರಣದಿಂದ ತಡೆಗೋಡೆ ಕುಸಿದ ಪರಿಣಾಮ ಅವರ ಮನೆಗೆ ಹಾನಿಯಾಗಿತ್ತು. ಅದರ ನಿರ್ವಹಣೆಗಾಗಿ ಈ ಸಹಾಯ ಧನ ಮಂಜೂರಾಗಿತ್ತು.ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಚೆಕ್ ಹಸ್ತಾಂತರಿಸಿದರು.ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಸೋಹನ್, ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ, ಸೇವಾ ಪ್ರತಿನಿಧಿ ಲೀಲಾವತಿ.ಡಿ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here