ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ: ಅಶೋಕ್ ರೈ

0

ಪುತ್ತೂರು: ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಹೋಲಿಕೆ ಸಲ್ಲದು. ಕಳೆದ ಅವಧಿಗಿಂತ ಈ ಬಾರಿ ಕಾಂಗ್ರೆಸ್ ಪಕ್ಷ ಹೆಚ್ಚು ಮತವನ್ನು ಪಡೆದಿದೆ. ಕಳೆದ ಬಾರಿಗಿಂತ ಈ ಬಾರಿ ಲೀಡ್ ಕೂಡಾ ಜಾಸ್ತಿಯಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಿಂದ ಪಕ್ಷ ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಸೋತಿರಬಹುದು ಆದರೆ ಲೀಡ್ ಅಂತರ ತುಂಬಾ ಕಡಿಮೆಯಾಗಿರುವುದು ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ರಾಜಕಾರಣಿಗಳು ಅಥವಾ ಅಧಿಕಾರದಲ್ಲಿದ್ದವರು ಮಾಡುವ ಪ್ರತೀಯೊಂದು ಕೆಲಸವನ್ನು ಜನ ಹತ್ತಿರದಿಂದ ಗಮನಿಸುತ್ತಾರೆ.‌ಸರ್ವಾಧಿಕಾರವನ್ನು ಜನ ಒಪ್ಪುವುದಿಲ್ಲ ಎಂಬುದಕ್ಕೆ ದೇಶದ ಒಟ್ಟು ಪಲಿತಾಂಶ ನಿದರ್ಶನವಾಗಿದೆ. ದೇಶದಲ್ಲಿ ಇಂಡಿಯಾ ಒಕ್ಕೂಟ ಮಹತ್ ಸಾಧನೆಯನ್ನು ಈ ಬಾರಿ‌ ಮಾಡಿದೆ. ಇಂಡಿಯಾ ಒಕ್ಕೂಟ ಅಧಿಕಾರ ನಡೆಸುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ದೇಶದ ರಾಜಕಾರಣದಲ್ಲಿ ನಾಳೆ ಏನು ಬೇಕಾದರೂ ನಡೆಯಬಹುದು. ಇಂಡಿಯಾ ಒಕ್ಕೂಟವೇ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here