ಜೂ.9: ನರಿಮೊಗರು ಪ್ರಸಾದಿನೀ ಆಯುರ್ನಿಕೇತನದಲ್ಲಿ ಆಹಾರ ಕ್ರಮದ ಕುರಿತು ಉಚಿತ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ಆಹಾರ ಮತ್ತು ಆರೋಗ್ಯ ಎಂಬ ಶೀರ್ಷಿಕೆಯ ಅಡಿಯಲ್ಲಿ, ನಾವು ದಿನ ನಿತ್ಯ ಬಳಸುವ ಆಹಾರಗಳಲ್ಲಿ ಆರೋಗ್ಯಕ್ಕೆ ಪೂರಕವಾದವುಗಳು ಮತ್ತು ಮಾರಕವಾದವುಗಳು ಯಾವುವು ಮತ್ತು ಆರೋಗ್ಯ ರಕ್ಷಣೆಗೆ ನಮ್ಮ ದಿನ ನಿತ್ಯದ ಆಹಾರ ಕ್ರಮ ಹೇಗಿರಬೇಕು ಎಂಬ ವಿಚಾರವಾಗಿ ಉಚಿತ ಜಾಗೃತಿ ಕಾರ್ಯಕ್ರಮ ಜೂ.9ರಂದು ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ.


ಆಯುರ್ವೇದ ತಜ್ಞ ವೈದ್ಯ ಹಾಗೂ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ಎನ್ ದುಗ್ಗಪ್ಪ ವಹಿಸಲಿದ್ದಾರೆ. ಆಹಾರ ಸೇವನೆಯಲ್ಲಿ ನಾವು ಮಾಡುವ ಎಡವಟ್ಟು ಇಂದಿನ ಜ್ವಲಂತ ಸಮಸ್ಯೆ. ಬದಲಾದ ಆಹಾರ ಸಂಸ್ಕೃತಿ ಹಾಗೂ ಜೀವನ ಶೈಲಿಯಿಂದಾಗಿ ಈಗಿನ ಕಾಲಘಟ್ಟದಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಹಲವಾರು ಹೇಳಹೆಸರಿಲ್ಲದ ಮಾರಕ ರೋಗಗಳಿಗೆ ಬಲಿಯಾಗುತ್ತಾ ಇರುವುದು ತಿಳಿದಿರುವ ವಿಚಾರ. ಅತಿಯಾಗಿ ಸಂಸ್ಕರಿಸಿದ ಆಹಾರಗಳ ಸೇವನೆಗೆ ನಾವೆಲ್ಲ ನಮ್ಮ ಅರಿವಿಗೆ ಬಾರದೆಯೇ ಒಗ್ಗಿಕೊಳ್ಳುತ್ತಾ ಇದ್ದೇವೆ ಮತ್ತು ಅದು ನಮ್ಮ ಮತ್ತು ನಮ್ಮ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದಾಳಿ ಮಾಡುತ್ತಾ ಇದೆ ಎನ್ನುವುದು ಒಂದು ಭಯಾನಕ ಸತ್ಯ. ಇದೇ ಆತಂಕವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೂಡಾ ವ್ಯಕ್ತಪಡಿಸ್ತಾ ಇದೆ ಮತ್ತು ಆಹಾರಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ನಿಟ್ಟಿನಲ್ಲಿ ಆಹಾರ ಹೇಗೆ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಮತ್ತು ಎಂತಹ ಆಹಾರ ಆರೋಗ್ಯಕ್ಕೆ ಪೂರಕ ಎಂಬುವುದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯ ಈಗ ಖಂಡಿತಾ ಇದೆ. ಇದನ್ನು ಅರಿತುಕೊಂಡು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ನಾವು ಆಹಾರಗಳಲ್ಲಿ ಆರೋಗ್ಯಕ್ಕೆ ಪೂರಕವಾದವುಗಳು ಮತ್ತು ಮಾರಕವಾದವುಗಳು ಯಾವುವು ಉಚಿತ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here