ಜೂ.7: ಮಂಗಳೂರಿನಲ್ಲಿ ರೈತರ ತರಬೇತಿ ಶಿಬಿರ-ಕಡಮಜಲು ಸುಭಾಸ್ ರೈಯವರು ಭಾಗಿ

0

ಪುತ್ತೂರು: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಇವರ ವತಿಯಿಂದ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿರುವ ನಿಗಮದ ಕಚೇರಿಯಲ್ಲಿ ಜೂ. 7 ರಂದು ರೈತರ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ತಾಲೂಕಿನ ವೈಜ್ಞಾನಿಕ ಗೇರು ಕೃಷಿಕ, ಗೇರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿರುವ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ – ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ಗೇರು ಕೃಷಿಯ ಬಗ್ಗೆ ಅನುಭವದ ಬಗ್ಗೆ ಮಾತನಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಡಿಸಿಆರ್ ನ ನಿರ್ದೇಶಕ ಡಾ. ದಿನಕರ ಅಡಿಗ ಮತ್ತು ಡಿಸಿಆರ್ ವಿಜ್ಞಾನಿ ಟಿ.ಎನ್. ರವಿಪ್ರಸಾದ್ ರವರಿಂದ ತಾಂತ್ರಿಕ ತರಬೇತಿ ನಡೆಯಲಿದೆ. ಅಪರಾಹ್ನ ‘ಮಾನವ ಸಂಪನ್ಮೂಲ’ ಮತ್ತು ಮಾನಸಿಕ ಒತ್ತಡ ಮತ್ತು ನಿವಾರಣೆ’ ವಿಷಯಗಳಲ್ಲಿ ತರಬೇತಿ ನಡೆಯಲಿದೆ.

LEAVE A REPLY

Please enter your comment!
Please enter your name here