ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನಲ್ಲಿ ರೆ.ಫಾ.ವರ್ಗೀಸ್ ಕೈಪನಡ್ಕರವರ ಮಾರ್ಗದರ್ಶನದಲ್ಲಿ ಜೂ.5ರಂದು ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಒಐಸಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ರವರು ಪರಿಸರದ ಮಹತ್ವದ ಕುರಿತು ಮಾತನಾಡಿ, ಮರಗಳನ್ನು ನೆಟ್ಟು ಬೆಳೆಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಶುದ್ಧ ಪರಿಸರ ನಾಶವಾಗುವುದರೊಂದಿಗೆ ನೀರಿನ ಕೊರತೆಯುಂಟಾಗಬಹುದು. ಈಗಾಗದಿರಲು ಪ್ರತಿಯೊಂದು ಮಗುವೂ ಒಂದೊಂದು ಮರವನ್ನಾದರೂ ತಮ್ಮ ಮನೆಯ ಪರಿಸರದಲ್ಲಿ ನೆಟ್ಟು ಬೆಳೆಸಬೇಕೆಂದು ಹೇಳಿದರು. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ವರ್ಗೀಸ್ ಕೈಪನಡ್ಕ ಅವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಮಾಡಬೇಕೆಂದು ಕಿವಿಮಾತು ಹೇಳಿದರು.
ಫಾತಿಮತ್ ಅಪ್ನ ನಿರೂಪಿಸಿದರು. ಶಿಕ್ಷಕ-ರಕ್ಷಕ ಸಂಘ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.