ಸುಳ್ಯಪದವು ಆಶಕ್ತ ವಿದ್ಯಾರ್ಥಿಗಳಿಗೆ ಪುಸ್ತಕ, ಮತ್ತು ಬ್ಯಾಗ್ ನೀಡಿ ಹುಟ್ಟು ಹಬ್ಬ ಆಚರಿಸಿದ ಸುಧೀರ್

0

ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಸುಮಾರು 17 ಆಶಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡುವ ಮೂಲಕ ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಸುಧೀರ್‌ರವರು ತನ್ನ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ತನ್ನಿಂದ ಏನಾದರೂ ಪ್ರಯೋಜನವಾಗಬೇಕು ಎನ್ನುವ ದೃಷ್ಟಿಕೋಣವನ್ನಿಟ್ಟು ಯುವ ಜನತೆಗೆ ಸ್ಫೂರ್ತಿಯಾದ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಮುಖಾಂತರವಾಗಿ ಮತ್ತು ಸುಮಾರು 300 ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಹುಟ್ಟುಹಬ್ಬದ  ಸಂಭ್ರಮ ಅಚಾರಿಸಿಕೊಂಡರು. ಇವರು ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯ ಸುಂದರ ಪೂಜಾರಿಯವರ ಪುತ್ರರಾಗಿದ್ದಾರೆ.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಸುಖೇಶ್ ರೈ ಕುತ್ಯಾಳ, ಸಹ ಶಿಕ್ಷಕಿ ಪ್ರಶಾಂತಿ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅಶೋಕ್ ಪಿ ಎಸ್, ಕಾರ್ಯದರ್ಶಿ  ರಜತ್ ಬೀರಮೂಲೆ,  ಕೋಶಾಧಿಕಾರಿ ಚೇತನ್  ಕುಲಾಲ್ ಬೀರಮೂಲೆ , ಉಪಾಧ್ಯಕ್ಷ ಚಂದ್ರಶೇಖರ ಭಂಡಾರಿ ಸುಳ್ಯಪದವು  ಶ್ರೀಯುತ್  ಭಂಡಾರಿ ಸುಳ್ಯಪದವು,   ಹಾಗೂ ಶಾಲಾ  ಶಾಲಾಭಿವೃದ್ಧಿ ಸಮಿತಿ  ಸದಸ್ಯರು, ಅಧ್ಯಾಪಕ ವೃಂದದವರು,ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here