ನೆಲ್ಯಾಡಿ: ಇಲ್ಲಿನ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ನಡೆದ ಪ್ರತಿಭೋತ್ಸದ ಕಾರ್ಯಕ್ರಮದಲ್ಲಿ ಕನ್ನಡ ಲೇಖಕಿ ಜೆಸ್ಸಿ ಪಿ.ವಿ ಅವರನ್ನು ಸಂತ ಅಲ್ಫೋನ್ಸ ಚರ್ಚ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಮತ್ತು ಆಂಗ್ಲ ಬಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜೆಸ್ಸಿ ಪಿ.ವಿ.ಅವರು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದಿರುವ ಲೇಖನ,ಕಥೆ, ಕವನಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲೂ ಭಾಷಣಗಳು ಪ್ರಸಾರವಾಗಿವೆ. ಇವರು ಆರ್ಲ ಮಾದೇರಿ ಪುದುಮನ ನಿವಾಸಿ ವರ್ಕಿ ಹಾಗೂ ಅನ್ನಮ್ಮ ದಂಪತಿಯ ಪುತ್ರಿ. ಸನ್ಮಾನ ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸಪುಣ್ಯ ಕ್ಷೇತ್ರದ ಧರ್ಮಗುರು ವಂ.ಫಾ. ಶಾಜಿ ಮ್ಯಾಥ್ಯು, ಟ್ರಸ್ಟಿಗಳಾದ ಜೋಬಿನ್, ಆಲ್ಬಿನ್, ಅಲೆಕ್ಸ್, ಶಿಬು, ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯರಾದ ರೊಯ್, ಸೇಕ್ರೆಡ್ ಹಾರ್ಟ್ ಭಗೀನಿಯರ ಮುಖ್ಯಸ್ಥೆ ವಂದನಿಯ ಸಿಸ್ಟರ್ ಲಿಸ್ ಮ್ಯಾಥ್ಯು, ರಕ್ಷಕ-ಶಿಕ್ಷಕ ಸಂಘದ ಪ್ರಕಾಶ್ ಕೆ.ಜೆ., ಲಿಸ್ಸಿ ಉಪಸ್ಥಿತರಿದ್ದರು.