ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಎರಡನೇ ಸುತ್ತಿನಲ್ಲಿಯೂ ಡಾ.ಧನಂಜಯ ಸರ್ಜಿ ಮುನ್ನಡೆ

0

ಪುತ್ತೂರು:ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರಗಳ ಮತ ಎಣಿಕೆ ಕಾರ್ಯಗಳು ನಡೆಯುತ್ತಿದ್ದು ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಎರಡನೇ ಸುತ್ತಿನಲ್ಲಿಯೂ ಮುನ್ನಡೆ ಕಾಯ್ದಿರಿಸಿಕೊಂಡಿದ್ದಾರೆ.


ಪ್ರಥಮ ಸುತ್ತಿನ 14,000 ಮತಗಳಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರು 6693, ಕಾಂಗ್ರೆಸ್‌ನ ಅಯನೂರು ಮಂಜುನಾಥ 2398 ಹಾಗೂ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ 3054 ಮತಗಳನ್ನು ಪಡೆದುಕೊಂಡಿದ್ದಾರೆ. ಡಾ.ಧನಂಜಯ ಸರ್ಜಿಯವರ ಪ್ರತಿಸ್ಪರ್ಧಿ ರಘುಪತಿ ಭಟ್ ವಿರುದ್ಧ 3639 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಸುತ್ತಿನ 25,000 ಮತಗಳಲ್ಲಿ ಡಾ.ಧನಂಜಯ ಸರ್ಜಿ 11,200 ಹಾಗೂ ಅಯನೂರು ಮಂಜುನಾಥ 7700 ಮತಗಳನ್ನು ಪಡೆದುಕೊಂಡು ಡಾ.ಧನಂಜಯ ಸರ್ಜಿ 3500 ಮತಗಳ ಮುನ್ನಡೆ ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here