CMAT -2024 ಪರೀಕ್ಷೆಯಲ್ಲಿ ಅದೀಶ್ ಕುಮಾರ್‌ಗೆ 98.21% ಅಂಕ

0

ಪುತ್ತೂರು: ಭಾರತ ಸರಕಾರದ ಉನ್ನತ ಶಿಕ್ಷಣ ಇಲಾಖೆಯು ನಡೆಸುವ CMAT ಪರೀಕ್ಷೆ-2024 ರಲ್ಲಿ ಅದೀಶ್ ಕುಮಾರ್ 98.21 % ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಇವರು ಹೈಸ್ಕೂಲ್ ತನಕದ ವಿದ್ಯಾಭ್ಯಾಸವನ್ನು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಡಿ, ಪಿಯುಸಿ ಶಿಕ್ಷಣವನ್ನು ಅಂಬಿಕಾ ಪ.ಪೂ. ಕಾಲೇಜು ನೆಲ್ಲಿಕಟ್ಟೆ ಇಲ್ಲಿ ಪೂರೈಸಿ ಉನ್ನತ ವಿದ್ಯಾಭ್ಯಾಸ ಡೈರಿಟೆಕ್ನಾಲಜಿಯನ್ನು ಬೆಂಗಳೂರು ಹೆಬ್ಬಾಳದಲ್ಲಿರುವ ಡೈರಿ ಸಾಯನ್ಸ್ ಕಾಲೇಜಿನಲ್ಲಿ ಮಾಡಿ ಅಮುಲ್ ಕಂಪೆನಿಯಲ್ಲಿ ನೌಕರಿಯಲ್ಲಿದ್ದಾರೆ. ಇವರು ಚಿಕ್ಕಪುತ್ತೂರು ನಿವಾಸಿ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ನಿರ್ದೇಶಕ ಸುದೇಶ್ ಕುಮಾರ್ ಮತ್ತು ಶೈಲಜಾ ಸುದೇಶ್ ದಂಪತಿಯ ಪುತ್ರ, ಶಾರದಾ ಗೋಪಾಲ್ ನಾಯಕ್ ಚಿಕ್ಕಪುತ್ತೂರು ಮತ್ತು ವಿಮಲಾ ಉಮೇಶ್ ನಾಯಕ್ ಮುಕ್ರಂಪಾಡಿ ಇವರ ಮೊಮ್ಮಗ.

LEAVE A REPLY

Please enter your comment!
Please enter your name here