ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆ-ನಾಯಕಿ ಸಮೀಕ್ಷ, ಉಪನಾಯಕಿ ಮಾನ್ಯ

0

ಪುತ್ತೂರು:ಇಲ್ಲಿನ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 2024-25ನೇ ಸಾಲಿನ ಶಾಲಾ ನಾಯಕಿಯಾಗಿ ಸಮೀಕ್ಷ ಕೆ ಹಾಗೂ ಉಪನಾಯಕಿಯಾಗಿ ಮಾನ್ಯ ಚುನಾಯಿತರಾಗಿದ್ದಾರೆ.
ಶಾಲಾ ನಾಯಕಿ ಮತ್ತು ಉಪನಾಯಕಿಯ ಚುನಾವಣೆಯು ಜೂ.7ರಂದು ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಸಲಾಯಿತು.

ಶಾಲಾ ನಾಯಕಿ ಸ್ಥಾನಕ್ಕೆ ಆರು ಅಭ್ಯರ್ಥಿಗಳು ಸ್ವರ್ಧಿಸಿದ್ದರು ಹಾಗೂ ಶಾಲಾ ಉಪನಾಯಕಿ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ನಾಯಕಿಯಾಗಿ 10ನೇ ತರಗತಿಯ ಸಮೀಕ್ಷ ಕೆ ಹಾಗೂ ಶಾಲಾ ಉಪನಾಯಕಿಯಾಗಿ 9ನೇ ತರಗತಿಯ ಮಾನ್ಯ ಆಯ್ಕೆಯಾಗಿದ್ದಾರೆ. ಸಮೀಕ್ಷ ಕೆ.ಯವರು ಹೇಮಚಂದ್ರ ಕೆ ಮತ್ತು ಶ್ರೀಮತಿ ಸುಮಿತ್ರ ದಂಪತಿ ಪುತ್ರಿ. ಮಾನ್ಯ ಪರಮೇಶ್ವರ ಜೆ ಮತ್ತು ಶೀಲಾವತಿ ಎಂ.ಎಸ್ ದಂಪತಿ ಪುತ್ರಿ. ಶಾಲಾ ಮುಖ್ಯೋಪಾಧ್ಯಾಯಿನಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಕ- ಶಿಕ್ಷಕೇತರರ ಸಹಕಾರದೊಂದಿಗೆ ಈ ಚುನಾವಣೆಯು ಸುಸೂತ್ರವಾಗಿ ನಡೆಸಲಾಯಿತು.

LEAVE A REPLY

Please enter your comment!
Please enter your name here