ಉಪ್ಪಿನಂಗಡಿ :ನರೇಂದ್ರ ಮೋದಿ ಕ್ಷೇಮಕ್ಕಾಗಿ ವೀರಾಂಜನೇಯ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ

0

ಉಪ್ಪಿನಂಗಡಿ : ಭಾರತದ ಪ್ರಧಾನಿಯಾಗಿ ಮೂರನೇ ಬಾರಿ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇಮಕ್ಕಾಗಿ , ಕ್ಷಾತ್ರ ತೇಜಸ್ಸಿನ ಆಡಳಿತಕ್ಕಾಗಿ ಭಗವಚಿತನ ಕೃಪೆಯನ್ನು ಬಯಸಿ ಬಿಜೆಪಿ ಮುಂದಾಳುಗಳಿಂದ ಉಪ್ಪಿನಂಗಡಿಯ ವೀರಾಂಜನೇಯ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


ದೇವಾಲಯದ ಅರ್ಚಕ ಸಂದೀಪ್ ಭಟ್ ಪ್ರಾರ್ಥನೆಯನ್ನು ನೆರವೇರಿಸಿದ್ದು, ದೇಶವಾಸಿಗರ ಆಪೇಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವಂತಾಗಿದೆ. ಬಿಜೆಪಿ ಪಕ್ಷಕ್ಕೆ ಸ್ವಂತ ಬಹುಮತ ಇಲ್ಲದಿದ್ದಾಗ್ಯೂ ಎನ್ ಡಿ ಎ ಪಕ್ಷದ ಎಲ್ಲಾ ಸದಸ್ಯರು ದೇಶದ , ಧರ್ಮದ ಹಿತಕ್ಕಾಗಿ ಒಗ್ಗಟ್ಟಿನಿಂದ , ನಿಸ್ವಾರ್ಥ ಮನೋಭಾವದಿಂದ ವರ್ತಿಸುವಂತಾಗಬೇಕು. ದೇಶದ ಒಳಗಿನ ಮತ್ತು ಹೊರಗಿನ ಎಲ್ಲಾ ದುಷ್ಠ ಶಕ್ತಿಗಳನ್ನು ನಿಗ್ರಹಿಸಿ , ರಾಷ್ಟ್ರವನ್ನು ಮತ್ತೊಮ್ಮೆ ಪರಂವೈಭವಕ್ಕೆ ಕೊಂಡೊಯ್ಯುವ ಶಕ್ತಿ ಸಾಮರ್ಥ್ಯವನ್ನು ಪ್ರಧಾನಿ ಮೋದಿಯವರಿಗೆ ಒದಗಿಸಬೇಕೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಲಾಯಿತು.


ಈ ಸಂಧರ್ಭದಲ್ಲಿ ಬಿಜೆಪಿ ಮುಂದಾಳುಗಳಾದ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಎನ್ ಉಮೇಶ್ ಶೆಣೈ, , ಸುನಿಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಆದೇಶ್ ಶೆಟ್ಟಿ, ವಿದ್ಯಾಧರ ಜೈನ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸುದರ್ಶನ್ , ಪವನ್ , ಹಿತೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here