ಮೋದಿ ಮತ್ತೊಮ್ಮೆ ಪ್ರಧಾನಿ- ಅಜ್ಜಿಕಲ್ಲು ಭಜನಾ ಮಂದಿರದಲ್ಲಿ ಭಜನಾ ಸೇವೆ, ಪ್ರಾರ್ಥನೆ

0

ಪುತ್ತೂರು: ನರೇಂದ್ರ ಮೋದಿಯವರು ರಾಷ್ಟ್ರದ ಪ್ರಧಾನ ಮಂತ್ರಿಯಾಗಿ 3 ಬಾರಿಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರು ಮುಂದಿನ 5 ವರ್ಷಗಳ ಕಾಲ ನಿರ್ವಿಘ್ನವಾಗಿ ಆಡಳಿತ ನಡೆಸುವಲ್ಲಿ ಭಗವಂತನು ಅನುಗ್ರಹ‌ ಪ್ರಾಪ್ತಿಯಾಗಲು ಅಜ್ಜಿಕಲ್ಲು ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಸೇವೆಯೊಂದಿಗೆ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಸಮತಿ ಅಧ್ಯಕ್ಷ ಸಂತೋಷ್ ಕುಮಾರ್ ಎನ್, ಪ್ರ.ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು, ಸಂಚಾಲಕ ಹರಿಪ್ರಸಾದ್ ರೈ ಮೊಡಪ್ಪಾಡಿ, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿ, ಭಜನಾ ಮಂದಿರದ  ಅರ್ಚಕ ಸತೀಶ್ ಅಜ್ಜಿಕಲ್ಲು, ಶರತ್ ದೇವಸ್ಯ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here