ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಹಾಗೂ ಪುತ್ತೂರು ಯೋಗ ಕೇಂದ್ರದಿಂದ ಸತ್ಸಂಗ ಕಾರ್ಯಕ್ರಮ

0

ನಿತ್ಯ ಜೀವನದ ಆಧ್ಯಾತ್ಮದಲ್ಲಿ ಯೋಗ ಬಹುಮುಖ್ಯ ಪಾತ್ರವಹಿಸುತ್ತದೆ- ಡಾ. ರಾಘವೇಂದ್ರ ಪೈ ಮೈಸೂರು

ಪುತ್ತೂರು:ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಹಾಗೂ ಯೋಗ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಜೂ.9ರಂದು ನೆಹರೂನಗರದ ಸದ್ಗುರು ನಿವಾಸದಲ್ಲಿ ಯೋಗ ಸತ್ಸಂಗ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಂತರ್‌ ರಾಷ್ಟ್ರೀಯ ಯೋಗ ತಜ್ನ ಡಾ. ರಾಘವೇಂದ್ರ ಪೈ ಮಾತನಾಡಿ ಯೋಗ ಮತ್ತು ಸತ್ಸಂಗಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವುಗಳನ್ನು ಸಮತೋಲನಗೊಳಿಸಿ ಕಾರ್ಯಪ್ರವೃತ್ತರಾದಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಶಾರೀರಿಕವಾಗಿ,ಮಾನಸಿಕವಾಗಿ, ಬೌಧಿಕವಾಗಿ, ಆದ್ಯಾತ್ಮಿಕವಾಗಿ ದೃಢತೆಗಳನ್ನು ಸಾಧಿಸಬೇಕಾದಲ್ಲಿ ಯೋಗ, ಪ್ರಾಣಾಯಾಮ, ನಾಮಸ್ಮರಣೆ, ಭಜನೆ ಬಹಳ ಮುಖ್ಯವಾಗಿದೆ.ಸರಳವಾಗಿ ಮಾಡುವ ಯೋಗಾಸನಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಅವಶ್ಯಕವಾಗಿದೆ. ಮನುಷ್ಯನ ಶರೀರದಲ್ಲಿರುವ ನೂರಾರು ಶಕ್ತಿಕೇಂದ್ರಗಳನ್ನು ಉದ್ದೀಪನಗೊಳಿಸಿ, ಜಾಗೃತಗೊಳಿಸಿ ದೈಹಿಕ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದರು.ಚಿಕ್ಕಮಗಳೂರು ಜಯಪುರದ ಉದ್ಯಮಿ ಜಯವಂತ ಭಟ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೈವಾಮ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್‌ ಮಳಿ, ಪ್ರಸಾದ್‌ ಪಾಣಾಜೆ, ಪ್ರಶಾಂತಿ ಟ್ರಸ್ಟ್‌ ನ ಡಾ. ಸಂತೋಷ್‌ ಪ್ರಭು , ಯಂ ಮಧುಸೂದನ ನಾಯಕ್‌, ಕಾರ್ಯಕ್ರಮ ಆಯೋಜಿಸಿ ನಿರ್ವಹಿಸಿದರು. ನೂರಾರು ಯೋಗಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here