ಚಾರ್ವಾಕ ಪೀಡರ್ ನ ಹೆಚ್ ಟಿ ಹಾಗೂ ಎಲ್ ಟಿ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಕಾಣಿಯೂರು: ಚಾರ್ವಾಕ ಗ್ರಾಮದ ಖಂಡಿಗ, ದೇವಸ್ಯ , ಮುಂಗ್ಲಿಮಜಲು, ಬಾಕಿಲ ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ವಿದ್ಯುತ್ ಬಳೆಕೆದಾರರು ಶ್ರಮದಾನದ ಮೂಲಕ ಮಾಡಿದರು.
ಸವಣೂರು ಮೆಸ್ಕಾಂನ ಮೆಕ್ಯಾನಿಕ್ ಉಮೇಶ್ ಹಾಗೂ ಪವರ್ ಮ್ಯಾನ್ ಮುಕ್ತಾರ್ ಅವರ ಮಾರ್ಗದರ್ಶನದಲ್ಲಿ ತೆರವು ಕಾರ್ಯ ನಡೆಯಿತು. ಸುಂದರ ದೇವಸ್ಯ, ಕೇಶವ, ದಿವಾಕರ, ತೀರ್ಥಪ್ರಸಾದ್, ಜಯಚಂದ್ರ, ಕೃಷ್ಣಪ್ಪ ವಿಶ್ವನಾಥ, ಸುಂದರ ಖಂಡಿಗ, ಮನೋಹರ್, ಲೊಕೇಶ್ , ಹರ್ಷಕುಮಾರ್ ಬಾಕಿಲ, ಉಮೇಶ್ ಮುಂಗ್ಲಿಮಜಲು, ಕಾಂತಪ್ಪ ಪರವ ಮೊದಲಾದವರು ಭಾಗಬಹಿಸಿದ್ದರು.

LEAVE A REPLY

Please enter your comment!
Please enter your name here