ವಿಟ್ಲ: ಅಳಿಕೆ ಗ್ರಾಮದ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ವಸಂತಪೂಜೆ ನಡೆಯಿತು.
ಭಜನಾ ಕಾರ್ಯಕ್ರಮವನ್ನು ನಿವೃತ್ತ ಯೋಧ ಶಿವರಾಮ್ ಭಟ್ ಬೈರಿಕಟ್ಟೆ ಉದ್ಘಾಟಿಸಿದರು. ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನವೂ ವಿಟ್ಲ ಸೀಮೆಯ ದೇವಸ್ಥಾನಗಳಲ್ಲಿ ಒಂದಾಗಿ ಪ್ರತಿ ವರ್ಷ ವಸಂತ ಮಾಸದಲ್ಲಿ ವಸಂತಪೂಜೆ ಮತ್ತು ದೀಪಾವಳಿ ಸಮಯದಲ್ಲಿ ತುಳಸಿ ಪೂಜೆ ನಡೆಯುತ್ತ ಬರುತ್ತಿದೆ. ವರ್ಷಂಪ್ರತಿ ಊರವರು ಶ್ರದ್ದಾ-ಭಕ್ತಿಯಿಂದ ತನ್ನ ಭೂಮಿಯಲ್ಲಿ ಬೆಳೆದು ತಂದ ಫಲ ಸಮರ್ಪಣೆಯ ಮೂಲಕ ವಸಂತ ಪೂಜೆ ನಡೆಯುತ್ತದೆ.
ಪ್ರಸ್ತುತ ವರ್ಷ ಅರ್ಚಕರಾದ ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ಊರವರ ಸಹಕಾರದಿಂದ ವಸಂತ ಪೂಜೆಯಂದು ನಿರಂತರ 12ಗಂಟೆಗಳ ಭಜನಾ ಕಾರ್ಯಕ್ರಮ, ವಿಷ್ಣುಸಹಸ್ರನಾಮ, ಪವಮಾನ ಅಭಿಷೇಕ, ಕಾರ್ತಿಕ ಪೂಜೆ ಅನ್ನಸಂತರ್ಪಣೆ ಮತ್ತು ವಸಂತಪೂಜೆ ಜರಗಿತು. ಇದೇ ಸಂದರ್ಭದಲ್ಲಿ ಸತತವಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಮಾಡುವ ಹೊತ್ತಲ್ಲೇ ದೇವರ ಮಂಗಲ ಪೂಜೆ ನೆರವೇರಿ ದೇಶದ ಬೆಳವಣಿಗೆಗೆ ಶ್ರಮಿಸುವ ಶಕ್ತಿ ಹಾಗೂ ಅವಕಾಶ ಮೋದಿಯವರಿಗೆ ದೊರಕಲೆಂದು ಪ್ರಾರ್ಥಿಸಲಾಯಿತು.