ಬೆಳಂದೂರು: ಈಡನ್ ಗ್ಲೋಬಲ್ ಶಾಲೆಯ 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕಿಂಡರ್ ಗಾರ್ಟನ್ ಮತ್ತು ಝಹೃತುಲ್ ಕುರ್‌ಆನ್ ವಿಭಾಗದ ಪುಟಾಣಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು. ಪ್ರಾರ್ಥನೆ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಪುಟ್ಟ ಮಕ್ಕಳ ಮೊದಲ ದಿನವನ್ನು ಅಲಿಫ್ ಡೇ ಎಂಬ ಶೀರ್ಷಿಕೆಯಿಂದ ಸಂಕೇತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಡನ್ ಗ್ಲೋಬಲ್ ಶಾಲೆಯ ಕಾರ್ಯದರ್ಶಿ ಬಶೀರ್ ಹಾಜಿ ಮಾತನಾಡಿದರು. ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಪೋಷಕರನ್ನುದ್ದೇಶಿಸಿ ಮಾತನಾಡಿದರು. ಕಿಂಡರ್ ಗಾರ್ಟನ್ ಕಾರ್ಡಿನೇಟರ್ ಶ್ರುತಿ ಅವರು ಮಕ್ಕಳ ಶೈಕ್ಷಣಿಕ ವರ್ಷದ ವಿವರಗಳನ್ನು ನೀಡಿದರು. ತರಗತಿ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ತಮ್ಮ ತರಗತಿ ಮತ್ತು ತಮ್ಮನ್ನು ಪರಿಚಯಿಸಿಕೊಂಡರು. ಕಾರ್ಯಕ್ರಮದ ಮುಖ್ಯ ಅಂಗವಾಗಿ ಎಲ್ಲಾ ಮಕ್ಕಳಿಗೆ ಅಲಿಫ್ ಅಕ್ಷರ ಬರೆಸುವ ಮೂಲಕ ತರಗತಿಗೆ ಪ್ರವೇಶ ನೀಡಲಾಯಿತು. ಕಾರ್ಯಕ್ರಮದಲ್ಲಿ ಮರ್ಕಝ್ ಕಾಲೇಜು ಆಡಳಿತ ಸಮಿತಿಯ ಕಾರ್ಯದರ್ಶಿ ಬಶೀರ್ ಹಾಜಿ, ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಕು.ಅಫ್ರೀನ್ ಬಾನು ಸ್ವಾಗತಿಸಿದರು. ಕಿಂಡರ್ ಗಾರ್ಟನ್ ಶಿಕ್ಷಕಿ ಕು.ಇಸ್ಫಾನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕು.ಸುನೈನಾ ವಂದಿಸಿದರು.