ಉಪ್ಪಿನಂಗಡಿ: ಚೇತರಿಕೆ ಕಂಡ ಜೀವನದಿಗಳ ಹರಿವು

0

ಉಪ್ಪಿನಂಗಡಿ: ಈ ಬಾರಿಯ ಮುಂಗಾರು ಮಳೆ ಸಕಾಲದಲ್ಲಿ ಸುರಿಯುತ್ತಿರುವುದರಿಂದ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವಿನಲ್ಲಿ ಚೇತರಿಕೆ ಕಂಡು ಬಂದಿದೆ.


ಕಳೆದ ನಾಲ್ಕೈದು ದಿನಗಳಿಂದ ಚುರುಕುಗೊಂಡ ಮುಂಗಾರಿನ ಪರಿಣಾಮ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನದಿಯು ನೀರಿಲ್ಲದೆ ಸೊರಗಿದ್ದು, ಈ ಬಾರಿ ಸಕಾಲದಲ್ಲಿ ಮುಂಗಾರಿನ ಆಗಮನವಾಗಿರುವ ಕಾರಣಕ್ಕೆ ಉಭಯ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳ ಕಾಣಿಸಿದೆ. ಆದಾಗ್ಯೂ ನದಿಯ ಒಡಲು ಪೂರ್ಣ ಪ್ರಮಾಣದಲ್ಲಿ ತುಂಬದೇ ಇದ್ದು, ಕುಮಾರಧಾರೆಯ ಸಂಗಮದ ಬಳಿಕ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಳಗೊಳ್ಳುತ್ತಿದೆ.


ಪ್ರವಾಹ ರಕ್ಷಣಾ ತಂಡ ಸನ್ನದ್ಧ:
ಉಪ್ಪಿನಂಗಡಿಯ ನೇತ್ರಾವತಿ- ಕುಮಾರಧಾರಾ ನದಿ ಸಂಗಮ ಸ್ಥಳ ಹಾಗೂ ಶ್ರೀ ಕ್ಷೇತ್ರ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಭಕ್ತಾದಿಗಳು ನೀರಿಗಿಳಿಯುವ ಸನ್ನಿವೇಶಗಳಿರುವುದರಿಂದ ಸ್ಥಳದಲ್ಲಿ ಗೃಹ ರಕ್ಷಕ ದಳದ ಘಟಕಾಧಿಕಾರಿ ದಿನೇಶ್ ಬಿ. ನೇತೃತ್ವದ ಪ್ರವಾಹ ರಕ್ಷಣಾ ತಂಡ ಮೊಕ್ಕಾಂ ಹೂಡಿ ಕಾರ್ಯೋನ್ಮುಖಗೊಂಡಿದೆ. ಈ ತಂಡಕ್ಕೆ ಈಗಾಗಲೇ ಜಿಲ್ಲಾಡಳಿತವು ರಬ್ಬರ್ ಬೋಟ್ ಸಹಿತ ಅಗತ್ಯ ಪರಿಕರಗಳನ್ನು ಒದಗಿಸಿ ಸರ್ವ ಸಜ್ಜಿತಗೊಳಿಸಿದೆ.

LEAVE A REPLY

Please enter your comment!
Please enter your name here