ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನಲಿಕಲಿ ಕಾರ್ಯಗಾರದಲ್ಲಿ ಶೈಕ್ಷಣಿಕ ಸಾಧನೆಗೆ ಶಿಕ್ಷಕರಿಗೆ ಕಾರ್ಯಾಗಾರಗಳು ಅವಶ್ಯ- ಶಿಕ್ಷಣಾಧಿಕಾರಿ ಮಂಜುನಾಥನ್

0

ವಿಟ್ಲ: ಶಾಲೆಯ ಮಕ್ಕಳಲ್ಲಿ ನಾಯಕತ್ವ, ಭ್ರಾತೃತ್ವ ಸಹೋದರತ್ವವನ್ನು ಶಿಕ್ಷಕರಾದ ನಾವು ಬೆಳೆಸಬೇಕು, ಶೈಕ್ಷಣಿಕ ಸಾಧನೆಗೆ ಶಿಕ್ಷಕರಿಗೆ ಕಾರ್ಯಾಗಾರಗಳು ಅವಶ್ಯಈ ನಿಟ್ಟಿನಲ್ಲಿ ನಲಿ ಕಲಿ ಕಾರ್ಯಾಗಾರ, ವಿದ್ಯಾಪ್ರವೇಶ ಮತ್ತು ಸೇತುಬಂಧ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ರವರು ಹೇಳಿದರು.

ಅವರು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನಲಿಕಲಿ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ರಾಘವೇಂದ್ರ ಬಲ್ಲಾಳರು ಮಾತನಾಡಿ ವಿಠ್ಠಲ್ ಜೇಸೀಸ್ ಆಂಗ್ಲ‌ಮಾಧ್ಯಮ ಶಾಲೆಯು ಸತತ 21 ವರ್ಷದಿಂದ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶವನ್ನು ಪಡೆಯುತ್ತಾ ಬಂದಿರುವುದು ಪ್ರಶಂಶಸನೀಯವಾಗಿದೆ, ಈ ನೆಲೆಯಲ್ಲಿ ಇದೊಂದು ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಶಿಕ್ಷಣ ಫಲಪ್ರದವಾಗಬೇಕು ಎಂಬ ಘೋಷಣೆಯೊಂದಿಗೆ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರದೀಪ್ ರವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಶಾಲಾ ಪ್ರಾಂಶುಪಾಲರಾದ ಜಯರಾಮ ರೈ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾ , ವಿಟ್ಲ ವಲಯ ಸಂಪನ್ಮೂಲ ವ್ಯಕ್ತಿಗಳಾದ ಬಿಂದು ಹಾಗೂ ಪುಷ್ಪ ಉಪಸ್ಥಿತರಿದ್ದರು. ಪುಷ್ಪಾವತಿ ಅವರು ಪ್ರಾರ್ಥಿಸಿದರು. ಕನ್ಯಾನ ವಲಯ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here