ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಮಾಸಿಕ ಥೈರಾಯಿಡ್ ತಪಾಸಣಾ ಶಿಬಿರ-ಉಚಿತ ಮಧುಮೇಹ, HBA1C, ಹಿಮೋಗ್ಲೋಬಿನ್, ನ್ಯೂರೋಪಥಿ ತಪಾಸಣೆ

0

ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಉಚಿತ ಮಧುಮೇಹ(GRBS), ಹಿಮೋಗ್ಲೋಬಿನ್,HBA1C, ನ್ಯೂರೋಪಥಿ ತಪಾಸಣೆಯು ಜೂ.12 ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ|ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಡಾ.ನಝೀರ್ ಅಹಮದ್ ರವರಲ್ಲಿ ಸಲಹೆ ಪಡೆದುಕೊಂಡರು.

ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಸದಸ್ಯರಾದ ಸುರೇಶ್ ಶೆಟ್ಟಿ, ಲೋವಲ್ ಮೇವಾಡ, ದಾಮೋದರ್, ಬಾಲಕೃಷ್ಣ ಆಚಾರ್ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೆಕ್ಲಾಯಿಡ್ ಕಂಪೆನಿಯ ವೀರೇಂದ್ರ, ಎಮ್ಯುಕ್ಯೂರ್ ಕಂಪೆನಿಯ ತೌಸೀಫ್, ಸನ್ ಫಾರ್ಮಾ ಕಂಪೆನಿಯ ನಿಶಾಂತ್ ಶೆಟ್ಟಿ, ಅಗಿಲಾಸ್ ಲ್ಯಾಬಿನ ಸಿಬ್ಬಂದಿ, ಡಾ.ನಝೀರ್ ಅಹಮದ್ ಡಯಾಬೆಟಿಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.

ಪಾಲ್ಗೊಂಡ ಫಲಾನುಭವಿಗಳು..

ಥೈರಾಯಿಡ್ ಪರೀಕ್ಷೆ-59 ಮಂದಿ

ಹಿಮೋಗ್ಲೋಬಿನ್ -75 ಮಂದಿ

HBA1C-30 ಮಂದಿ

ಮಧುಮೇಹ-50 ಮಂದಿ

ನ್ಯೂರೋಪಥಿ-15 ಮಂದಿ

LEAVE A REPLY

Please enter your comment!
Please enter your name here