ಕೆಮ್ಮಿಂಜೆ ಎಪಿಎನ್ ಕ್ರಿಯೇಷನ್ಸ್‌ನಿಂದ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ

0

ಪುತ್ತೂರು: ಕೆಮ್ಮಿಂಜೆ ಎಪಿಎನ್ ಕ್ರಿಯೇಷನ್ಸ್ ವತಿಯಿಂದ ನಡೆದ “ನನ್ನಮ್ಮ ಸೂಪರ್‌ಸ್ಟಾರ್” ಫೋಟೋ ಸ್ಪರ್ಧೆ ಮತ್ತು “ಡ್ಯಾಡಿ ನಂ.1 “ಪೋಟೋ ಸ್ಪರ್ಧೆಳಿಗೆ ನಿಗದಿಪಡಿಸಿದ್ದ ನೋಂದಣಿ ಶುಲ್ಕದಲ್ಲಿ ಉಳಿತಾಯವಾದ ಮೊತ್ತವನ್ನು ಏನೆಕಲ್ಲು ನಿವಾಸಿ ಲಕ್ಷ್ಮಣಗೌಡರವರ ಪುತ್ರಿ ನಾಲ್ಕು ವರ್ಷ ಪ್ರಾಯದ ವಂಶಿ ಎಲ್.ರವರ ಚಿಕಿತ್ಸಾ ವೆಚ್ಚಕ್ಕೆ ನೀಡಲಾಯಿತು.

ಇವರು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಇವರ ಕುಟುಂಬಕ್ಕೆ ದಾನಿಗಳ ಸಹಕಾರದೊಂದಿಗೆ ಸುಮಾರು 10ಸಾವಿರ ರೂ.ಗಳನ್ನು ಎಪಿಎನ್ ಕ್ರಿಯೇಷನ್ಸ್ ಮುಖಾಂತರ ಹಸ್ತಾಂತರಿಸಲಾಯಿತು. 2024ರ ಎ.1ರಂದು ನನ್ನಮ್ಮ ಸೂಪರ್‌ಸ್ಟಾರ್ ಮತ್ತು ಡ್ಯಾಡಿ ನಂ.1 ಫೋಟೋ ಸ್ಪರ್ಧೆ ಆರಂಭಗೊಂಡಿತ್ತು. ಎಪಿಎನ್ ಕ್ರಿಯೇಷನ್ಸ್ ಏರ್ಪಡಿಸುವ ಸ್ಪರ್ಧೆಗಳ ಮೂಲಕ ಸಹಾಯಾರ್ಥ ಪಡೆದ 20ನೇ ಕುಟುಂಬವಾಗಿರುತ್ತದೆ.

LEAVE A REPLY

Please enter your comment!
Please enter your name here