ಮರ್ದಾಳ: ಗುಡ್ ಶೆಫರ್ಡ್ ಶಾಲೆಯಲ್ಲಿ ಪ್ರಾರಂಭೋತ್ಸವ

0

ಕಡಬ: ಗುಡ್ ಶೆಫರ್ಡ್ ಶಾಲೆಯಲ್ಲಿ ಫ್ರೀಕೆಜಿ, ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಜೂ.10ರಂದು ನಡೆಯಿತು.ಪೋಷಕರೊಂದಿಗೆ ಶಾಲೆಗೆ ಆಗಮಿಸಿದ ಪುಟಾಣಿಗಳಿಗೆ ಬಲೂನು ನೀಡಿ, ಆರತಿ ಬೆಳಗಿ ಪುಷ್ಪ ಸಿಂಚನದೊಂದಿಗೆ ಸಿಹಿ ತಿನ್ನಿಸಿ ಬರಮಾಡಿಕೊಳ್ಳಲಾಯಿತು.

ಮೈ ಫಸ್ಟ್ ಡೇ ಆಫ್ ಸ್ಕೂಲ್ ಫ್ರೇಮ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಪುಟಾಣಿಗಳೊಂದಿಗೆ ಪೋಷಕರು ಸಂಭ್ರಮಿಸಿದರು. ಶಾಲಾ ಸಂಚಾಲಕರಾದ ತೋಮಸ್ ಪಿ.ವಿ., ಮುಖ್ಯಶಿಕ್ಷಕಿ ಪ್ರಿಯ ಕುಮಾರಿ, ಶೈಕ್ಷಣಿಕ ಸಲಹೆಗಾರ್ತಿ ಮೇಫಿ ಅವರು ಪುಟಾಣಿಗಳಿಗೆ ಶುಭಹಾರೈಸಿದರು. ಶಿಕ್ಷಕ-ಶಿಕ್ಷಕೇತರ ವೃಂದ, ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here